Corona Update in India: ದೇಶದಲ್ಲಿ ಮತ್ತೊಮ್ಮೆ ಕೊರೊನಾ ಪ್ರಕರಣಗಳ ಸಂಖ್ಯೆ 2 ಸಾವಿರ ದಾಟಿದೆ
Corona Update in India: ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಮಂಗಳವಾರ 1247 ಪ್ರಕರಣಗಳು ದಾಖಲಾಗಿತ್ತು ಮತ್ತು ಈಗ 2,067 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ನವದೆಹಲಿ: ದೇಶದಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಮಂಗಳವಾರ 1247 ಪ್ರಕರಣಗಳು ದಾಖಲಾಗಿತ್ತು ಮತ್ತು ಈಗ 2,067 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4,30,47,594 ಕ್ಕೆ ತಲುಪಿದೆ. ಇವುಗಳಲ್ಲಿ 12,340 ಪ್ರಕರಣಗಳು ಸಕ್ರಿಯವಾಗಿವೆ. ಇಲ್ಲಿಯವರೆಗೆ 5,22,006 ಜನರು ಸಾವನ್ನಪ್ಪಿದ್ದಾರೆ. ಇನ್ನು 4,25,13,248 ಮಂದಿ ಚೇತರಿಸಿಕೊಂಡಿದ್ದಾರೆ.
ಏತನ್ಮಧ್ಯೆ, 40 ಜನರು ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. 1,547 ಜನರು ವೈರಸ್ನಿಂದ ಚೇತರಿಸಿಕೊಂಡಿದ್ದಾರೆ.
➡️ India's Recovery Rate currently stands at 98.76%.
➡️ India's Cumulative Recoveries over 4.25 Cr (4,25,13,248).#Unite2FightCorona #We4Vaccine pic.twitter.com/yTBOlESzMY
— #IndiaFightsCorona (@COVIDNewsByMIB) April 20, 2022
ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಪ್ರಕ್ರಿಯೆ ನಡೆಯುತ್ತಿದೆ. ಇದುವರೆಗೆ 1,86,90,56,607 ಲಸಿಕೆ ಡೋಸ್ಗಳನ್ನು ವಿತರಿಸಲಾಗಿದ್ದು, ಮಂಗಳವಾರ 17,23,733 ಜನರಿಗೆ ಲಸಿಕೆ ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 4,21,183 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಒಟ್ಟು 83.29 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.
India Reports 2067 New Corona Cases
Follow Us on : Google News | Facebook | Twitter | YouTube