Corona Cases India ದೇಶದಲ್ಲಿ ಹೊಸದಾಗಿ 7992 ಕೊರೊನಾ ಪ್ರಕರಣಗಳು

ದೇಶದಲ್ಲಿ 7992 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 3,46,82,736ಕ್ಕೆ ಏರಿಕೆಯಾಗಿದೆ.

ನವದೆಹಲಿ : ದೇಶದಲ್ಲಿ 7992 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 3,46,82,736ಕ್ಕೆ ಏರಿಕೆಯಾಗಿದೆ. ಇವರಲ್ಲಿ 3,41,14,331 ಸೋಂಕಿತರು ಕರೋನಾದಿಂದ ಚೇತರಿಸಿಕೊಂಡಿದ್ದಾರೆ ಮತ್ತು 4,75,128 ಮಂದಿ ಸಾವನ್ನಪ್ಪಿದ್ದಾರೆ.

ಇನ್ನೂ 93,277 ಪ್ರಕರಣಗಳು ಸಕ್ರಿಯವಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 559 ದಿನಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಷ್ಟು ಕಡಿಮೆ ಮಟ್ಟವನ್ನು ತಲುಪಿರುವುದು ಇದೇ ಮೊದಲು.

ಕಳೆದ 24 ಗಂಟೆಗಳಲ್ಲಿ 398 ಸೋಂಕಿತರು ಸಾವನ್ನಪ್ಪಿದ್ದಾರೆ ಮತ್ತು 9265 ಜನರು ಕೊರೊನಾದಿಂದ ಪಾರಾಗಿದ್ದಾರೆ. ಇಲ್ಲಿಯವರೆಗೆ 131.99 ಕೋಟಿ ಕೊರೊನಾ ಲಸಿಕೆ ಡೋಸ್‌ಗಳನ್ನು ವಿತರಿಸಲಾಗಿದೆ.

Stay updated with us for all News in Kannada at Facebook | Twitter
Scroll Down To More News Today