ಮಧ್ಯಪ್ರದೇಶದಲ್ಲಿ ವಾಯುಪಡೆಯ ವಿಮಾನ ಪತನ

ಮಧ್ಯಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಮಿರಾಜ್ -2000 ಯುದ್ಧ ವಿಮಾನ ಪತನಗೊಂಡಿದೆ. ರಾಜ್ಯದ ಬೆಂಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆದರೆ, ವಿಮಾನದಲ್ಲಿದ್ದ ಪೈಲಟ್ ಸುರಕ್ಷಿತವಾಗಿದ್ದಾರೆ.

ಭೋಪಾಲ್: ಮಧ್ಯಪ್ರದೇಶದಲ್ಲಿ ಭಾರತೀಯ ವಾಯುಪಡೆಯ ಮಿರಾಜ್ -2000 ಯುದ್ಧ ವಿಮಾನ ಪತನಗೊಂಡಿದೆ. ರಾಜ್ಯದ ಬೆಂಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆದರೆ, ವಿಮಾನದಲ್ಲಿದ್ದ ಪೈಲಟ್ ಸುರಕ್ಷಿತವಾಗಿದ್ದಾರೆ. ಬೆಂಡ್ ನಿಂದ ಆರು ಕಿಲೋಮೀಟರ್ ದೂರದಲ್ಲಿರುವ ಮಂಕಾಬಾದ್ ನ ಖಾಲಿ ಭೂಮಿಯಲ್ಲಿ ವಿಮಾನ ಪತನಗೊಂಡಿದೆ.

ಫೈಟರ್ ಜೆಟ್ ಮಿರಾಜ್ -2000 ಅಪಘಾತಕ್ಕೀಡಾದ ಪ್ರದೇಶವನ್ನು ಪೊಲೀಸರು ಪರಿಶೀಲಿಸಿದರು. ವಿಮಾನದ ಬಾಲದ ಭಾಗ ನೆಲಕ್ಕೆ ತೂರಿಕೊಂಡಿತ್ತು. ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.