Arms recovered: ಭಾರೀ ಶಸ್ತ್ರಾಸ್ತ್ರ, ಸ್ಫೋಟಕ ವಶ..!

ಪೂಂಚ್ ಜಿಲ್ಲೆಯ ಮೆಂಧರ್ ಉಪ ವಿಭಾಗದಲ್ಲಿ ಭಾರೀ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳು ಪತ್ತೆಯಾಗಿವೆ. ಭದ್ರತಾ ಪಡೆಗಳು ಅವುಗಳನ್ನು ವಶಪಡಿಸಿಕೊಂಡಿವೆ.

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ಭಯೋತ್ಪಾದಕರ ದಾಳಿಗಳು ನಡೆಯುತ್ತಿದ್ದು, ಪೊಲೀಸರು ಮತ್ತು ಸೇನಾ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ. ಇದರ ಭಾಗವಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಪಡೆಗಳು ಕಳೆದ ಎರಡು ವಾರಗಳಿಂದ ಭೂತಾ ದುರಿಯನ್ ಅರಣ್ಯದಲ್ಲಿ ಜಂಟಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ನಡೆಸುತ್ತಿವೆ.

ಈ ಅವಧಿಯಲ್ಲಿ, ಪೂಂಚ್ ಜಿಲ್ಲೆಯ ಮೆಂಧರ್ ಉಪ ವಿಭಾಗದಲ್ಲಿ ಭಾರೀ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳು ಪತ್ತೆಯಾಗಿವೆ. ಭದ್ರತಾ ಪಡೆಗಳು ಅವುಗಳನ್ನು ವಶಪಡಿಸಿಕೊಂಡಿವೆ. ಶೋಧಕಾರ್ಯಗಳು ಇನ್ನೂ ಬಲವಾಗಿ ನಡೆಯುತ್ತಿವೆ.

Stay updated with us for all News in Kannada at Facebook | Twitter
Scroll Down To More News Today