ಮಧ್ಯಪ್ರದೇಶದ ಇಂದೋರ್ ಮತ್ತೊಮ್ಮೆ ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ ಅಗ್ರಸ್ಥಾನ

ಮಧ್ಯಪ್ರದೇಶದ ಇಂದೋರ್ ಮತ್ತೊಮ್ಮೆ ದೇಶದ ಸ್ವಚ್ಛ ನಗರ ಎಂಬ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇಂದೋರ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವುದು ಇದು ಐದನೇ ಬಾರಿ. ಸೂರತ್ (ಗುಜರಾತ್) ಎರಡನೇ ಮತ್ತು ಆಂಧ್ರಪ್ರದೇಶದ ವಿಜಯವಾಡ ಮೂರನೇ ಸ್ಥಾನದಲ್ಲಿದೆ.

ನವದೆಹಲಿ:  ಮಧ್ಯಪ್ರದೇಶದ ಇಂದೋರ್ ಮತ್ತೊಮ್ಮೆ ದೇಶದ ಸ್ವಚ್ಛ ನಗರ ಎಂಬ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇಂದೋರ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವುದು ಇದು ಐದನೇ ಬಾರಿ. ಸೂರತ್ (ಗುಜರಾತ್) ಎರಡನೇ ಮತ್ತು ಆಂಧ್ರಪ್ರದೇಶದ ವಿಜಯವಾಡ ಮೂರನೇ ಸ್ಥಾನದಲ್ಲಿದೆ.

ಜಾರ್ಖಂಡ್ ದೇಶದಲ್ಲೇ ಅತ್ಯಂತ ಸ್ವಚ್ಛ ರಾಜ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಶನಿವಾರ ‘ಸ್ವಚ್ಛ ಸಮೀಕ್ಷೆ-2021’ ಪ್ರಶಸ್ತಿಗಳನ್ನು ಪ್ರಕಟಿಸಿದೆ. ವಿಜೇತರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇಂದೋರ್‌ನ ಯಶಸ್ಸಿಗೆ ನಗರದ ಜನತೆಗೆ ಜಿಲ್ಲಾಧಿಕಾರಿ ಅಭಿನಂದನೆ ಸಲ್ಲಿಸಿದರು. ‘ಸತತ ಐದನೇ ಬಾರಿಗೆ ಇಂದೋರ್ ಅನ್ನು ದೇಶದ ಅತ್ಯಂತ ಸ್ವಚ್ಛ ನಗರವನ್ನಾಗಿ ಮಾಡಿದ್ದಕ್ಕಾಗಿ ಇಂದೋರ್ ಜನತೆಗೆ ಅಭಿನಂದನೆಗಳು. ನೈರ್ಮಲ್ಯದ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಇದು ಸಾಧ್ಯವಾಯಿತು, ”ಎಂದು ಜಿಲ್ಲಾಧಿಕಾರಿ ಮನೀಶ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಇಂದೋರ್ ಈಗಾಗಲೇ ದೇಶದ ಮೊದಲ ವಾಟರ್ ಪ್ಲಸ್ ಸಿಟಿ ಎನಿಸಿಕೊಂಡಿದೆ. ಏತನ್ಮಧ್ಯೆ, ಸ್ವಚ್ಛ ಸಮೀಕ್ಷೆಯು ‘ಸ್ವಚ್ಛ ಭಾರತ್ ಮಿಷನ್’ ಭಾಗವಾಗಿ ದೇಶಾದ್ಯಂತ ನಗರಗಳು ಮತ್ತು ಪಟ್ಟಣಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ವಾರ್ಷಿಕ ಸಮೀಕ್ಷೆ ನಡೆಸಿದೆ.

Stay updated with us for all News in Kannada at Facebook | Twitter
Scroll Down To More News Today