ಎಎಪಿ ಮುಖಂಡನ ಮೇಲೆ ಶಾಯಿ ದಾಳಿ

ಎಎಪಿ ನಾಯಕ ಸಂಜಯ್ ಸಿಂಗ್ ಅವರು ಹತ್ರಾಸ್ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದ ನಂತರ ಶಾಯಿ ದಾಳಿ

ಹತ್ರಾಸ್‌ನಲ್ಲಿ ಆಮ್ ಆದ್ಮಿ ನಾಯಕ ಎಎಪಿ ಮುಖಂಡ ಸಂಜಯ್ ಸಿಂಗ್ ಅವರ ಮೇಲೆ ಶಾಯಿ ಎರಚಲಾಗಿದೆ. ಸೆಪ್ಟೆಂಬರ್ 29 ರಂದು ದೆಹಲಿಯಲ್ಲಿ ಗಾಯಗೊಂಡು ಸಾವನ್ನಪ್ಪಿದ 19 ವರ್ಷದ ಸಾಮೂಹಿಕ ಅತ್ಯಾಚಾರಕ್ಕೊಳಗಾದವರ ಕುಟುಂಬ ಸದಸ್ಯರನ್ನು ಭೇಟಿಯಾದ ವಾಪಸ್ಸಾಗುವ ವೇಳೆ ಈ ಘಟನೆ ನಡೆದಿದೆ.

( Kannada News ) ಹತ್ರಸ್ ಜಿಲ್ಲೆಯಲ್ಲಿ ಅತ್ಯಾಚಾರ ಹಾಗೂ ಭೀಕರ ಹಲ್ಲೆಯಿಂದಾಗಿ ದಿಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಸಂತ್ರಸ್ತ ದಲಿತ ಯುವತಿಯ ಕುಟುಂಬ ಸದಸ್ಯರನ್ನು ಸೋಮವಾರ ಭೇಟಿಯಾಗಿ ವಾಪಸಾಗುತ್ತಿದ್ದಾಗ ಆಮ್ ಆದ್ಮಿ ಪಕ್ಷ( ಎಎಪಿ)ಮುಖಂಡ ಸಂಜಯ್ ಸಿಂಗ್ ಮೇಲೆ ಶಾಯಿ ಎರಚಿರುವ ಘಟನೆ ನಡೆದಿದೆ.

ಸಂತ್ರಸ್ತೆ ಯುವತಿಯ ಮನೆಯ ಹೊರಗೆ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ದೀಪಕ್ ಹೆಸರಿನ ವ್ಯಕ್ತಿ ಶಾಯಿ ಎರಚಿ ಘೋಷಣೆ ಕೂಗಿದ್ದಾನೆ. ಇದರಿಂದ ರಾಜ್ಯಸಭಾ ಸಂಸದ ಒಂದು ಕ್ಷಣ ವಿಚಲಿತರಾದರು. ದೀಪಕ್ ನನ್ನು ಆಪ್ ಬೆಂಬಲಿಗರು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ತನ್ನ ಮೇಲೆ ಶಾಯಿ ಎರಚಿದ ಘಟನೆಯ ಬಳಿಕ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ನನಾಥ್ ರನ್ನು ತರಾಟೆಗೆ ತೆಗೆದುಕೊಂಡ ಸಿಂಗ್, ಆದಿತ್ಯನಾಥ್ ಠಾಕೂರ್ ಅಲ್ಲ,ಆತ ಓರ್ವ ಹೇಡಿ ಎಂದು ದೂಷಿಸಿದ್ದಾರೆ. ‘ಸಂತ್ರಸ್ತ ಯುವತಿಯ ಮನೆಗೆ ಹೋಗಿ ವಾಪಸಾಗುತ್ತಿದ್ದ ವೇಳೆ ಇಂಕ್ ಎರಚಲಾಗಿದೆ. ಇದೊಂದು ಹೇಡಿಗಳ ಕೃತ್ಯ. ಆದಿತ್ಯನಾಥ್ ಅವರೇ ನೀವು ಠಾಕೂರ್ ಅಲ್ಲ. ನೀವೊಬ್ಬ ಹೇಡಿ.

ನಿಮಗೆ ಎಷ್ಟು ಸಾಧ್ಯವೋ ಅಷ್ಟು ಪ್ರಕರಣಗಳನ್ನು ನನ್ನ ಮೇಲೆ ದಾಖಲಿಸಿ. ನನ್ನ ಮೇಲೆ ಲಾಠಿಚಾರ್ಜ್ ಮಾಡಿಸಿ, ಇಲ್ಲವೇ ಸಾಯಿಸಿ. ಆದರೆ ಸಂತ್ರಸ್ತ ಕುಟುಂಬಕ್ಕೆ ನ್ನಾಯ ಒದಗಿಸಲು ನನ್ನ ಹೋರಾಟ ಮುಂದುವರಿಯಲಿದೆ ಎಂದು ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.

ಸಂಜಯ್ ಸಿಂಗ್ ನೇತೃತ್ವದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ನಿಯೋಗ ಸೋಮವಾರ ಹತ್ರಾಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿತು.

Scroll Down To More News Today