Welcome To Kannada News Today

ಅಕ್ರಮ ಪಾಕ್ ನುಸುಳುಕೋರನ ಬಲಿ, ಹೊಡೆದುರುಳಿಸಿದ ಭಾರತೀಯ ಸೇನೆ

Intruder shot dead at Indo-Pak border village

🌐 Kannada News :

ಅಮೃತಸರ : ಭಾರತ ಮತ್ತು ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿ ಮೂಲಕ ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ನುಸುಳುಕೋರನ್ನು ಭಾರತೀಯ ಸೇನೆಯ ಸೈನಿಕರು ಭಾನುವಾರ ತಡರಾತ್ರಿ ಹೊಡೆದುರುಳಿಸಿದ್ದಾರೆ.

ಇಂಡೋ-ಪಾಕ್ ಗಡಿಯಲ್ಲಿ ಅಪರಿಚಿತ ಪಾಕಿಸ್ತಾನಿ ನುಸುಳುಕೋರನಿಗೆ ಭಾನುವಾರ ಬಿಎಸ್ಎಫ್ ಸಿಬ್ಬಂದಿ ಪದೇ ಪದೇ ಎಚ್ಚರಿಸಿದರೂ ಕಡೆಗಣಿಸಿ ಗಡಿ ಅತಿಕ್ರಮಿಸಲು ಪ್ರಯತ್ನಿಸಿದ್ದಕ್ಕಾಗಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿ ಸಮೀಪದ ಭಿಂದಿ ಸೈದಾ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಗಡಿ ಭದ್ರತಾ ಪಡೆ ಗಸ್ತು ತಂಡ ಕೆಲವು ಅನುಮಾನಾಸ್ಪದ ವ್ಯಕ್ತಿಯ ಚಲನೆಯನ್ನು ಗಮನಿಸಿದ್ದಾರೆ,  ಬಳಿಕ ಎಚ್ಚರಿಕೆ ನೀಡಿದರೂ ಆತ ಕಡೆಗಣಿಸಿದ್ದ ಎಂದು ಅವರು ಹೇಳಿದರು.

ಸೈನಿಕರು ಸತತವಾಗಿ ಎಚ್ಚರಿಕೆ ನೀಡುತ್ತಿದ್ದರೂ ಆತ ಸೈನಿಕರ ಮಾತನ್ನು ಕಿವಿಗೆ ಹಾಕಿಕೊಳ್ಳದೇ ತನ್ನ ಕಾರ್ಯ ಮುಂದುವರೆಸಿದ್ದ. ಹೀಗಾಗಿ ಅನ್ಯಮಾರ್ಗವಿಲ್ಲದೇ ಸೈನಿಕರು ಬಂದೂಕಿನ ಮೂಲಕ ಗುಂಡು ಹಾರಿಸಿದರು. ಈ ವೇಳೆ ಆತ ಗುಂಡೇಟಿನಿಂದಾಗಿ ಸ್ಥಳದಲ್ಲೇ  ಪ್ರಾಣ ಬಿಟ್ಟಿದ್ದಾನೆ ಎಂದು ಸೇನಾಮೂಲಗಳ ತಿಳಿಸಿವೆ.

ಆತನಿಂದ ಯಾವುದೇ ಶಸ್ತ್ರಾಸ್ತ್ರ, ಯುದ್ಧಸಾಮಗ್ರಿ ಅಥವಾ ಇತರ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile