ಜಯಲಲಿತಾ ಪರಂಪರೆ ವಿವಾದ, ಧಿಡೀರ್ ಪ್ರತ್ಯಕ್ಷಳಾದ ಜಯಲಲಿತಾ ಪುತ್ರಿ ?

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಪರಂಪರೆ ವಿವಾದ ಮತ್ತೆ ಮರುಕಳಿಸಿದೆ. ಪ್ರೇಮಾ ಎಂಬ ಮಹಿಳೆ ಜಯಲಲಿತ ಸಮಾಧಿ ಬಳಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಾನು ಜಯಲಲಿತಾ ಪುತ್ರಿ ಎಂದು ಪ್ರೇಮಾ ಘೋಷಿಸಿದ್ದಾರೆ. 

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಪರಂಪರೆ ವಿವಾದ ಮತ್ತೆ ಮರುಕಳಿಸಿದೆ. ಪ್ರೇಮಾ ಎಂಬ ಮಹಿಳೆ ಜಯಲಲಿತ ಸಮಾಧಿ ಬಳಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಾನು ಜಯಲಲಿತಾ ಪುತ್ರಿ ಎಂದು ಪ್ರೇಮಾ ಘೋಷಿಸಿದ್ದಾರೆ.

ಈ ಸಂಬಂಧ ತನ್ನ ಬಳಿ ಎಲ್ಲ ಸಾಕ್ಷ್ಯಗಳಿವೆ ಎನ್ನುತ್ತಾರೆ ಪ್ರೇಮಾ. ಇದರೊಂದಿಗೆ ಅವರಿಗೆ ಶಶಿಕಲಾ ಭೇಟಿಗೆ ಅಪಾಯಿಂಟ್ ಮೆಂಟ್ ಸಹ ನೀಡಿದ್ದಾರೆ. ಇದರೊಂದಿಗೆ ಇನ್ನಷ್ಟು ಕುತೂಹಲ ಹೆಚ್ಚಿದೆ.

ತಮಿಳುನಾಡು ಮಾಜಿ ಸಿಎಂ ಜಯಲಲಿತಾ
ತಮಿಳುನಾಡು ಮಾಜಿ ಸಿಎಂ ಜಯಲಲಿತಾ

ಪ್ರೇಮಾ, ತಾನು ಜಯಾ ಅವರ ವಾರಸುದಾರರು ಎಂದು ಪ್ರೆಸ್ ಮೀಟ್ ನಡೆಸಿದ್ದಾರೆ. ಇನ್ನು ಮೂರು ದಿನಗಳಲ್ಲಿ ಶಶಿಕಲಾ ಅವರನ್ನು ಭೇಟಿ ಮಾಡಲಿದ್ದಾರೆ. ಶಶಿಕಲಾ ಅವರಿಗೆ ಅಪಾಯಿಂಟ್‌ಮೆಂಟ್ ನೀಡಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ. ಜಯಲಲಿತಾ ನಿಧನದ ನಂತರ ಉತ್ತರಾಧಿಕಾರಿ ವಿವಾದ ಮುಂದುವರಿದಿದೆ.

ಅಮೃತಾ ಎಂಬ ಮಹಿಳೆ ಈ ಹಿಂದೆಯೂ ಇದೇ ರೀತಿಯ ವಾದ ಮಂಡಿಸಿದ್ದರು. ಈಗ ಈ ಪ್ರೇಮ ? ಆಕೆ ಬಳಿ ಯಾವ ಸಾಕ್ಷ್ಯವಿದೆ? ಎಲ್ಲರೂ ಕುತೂಹಲದಿಂದ ಕಾದಿದ್ದಾರೆ.