ಓಮಿಕ್ರಾನ್ ಎಫೆಕ್ಟ್ : ಮುಂಬೈನಲ್ಲಿ ಇಂದು, ನಾಳೆ ಸೆಕ್ಷನ್ 144

ಮುಂಬೈನಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟೆಚ್ಚರ ವಹಿಸಿದೆ. ಮಹಾನಗರವು ಇಂದು ಮತ್ತು ನಾಳೆ ಮುಂಬೈನಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸುತ್ತಿದೆ

ಮುಂಬೈ : ಮಹಾರಾಷ್ಟ್ರವು ಇತ್ತೀಚಿನ ರೂಪಾಂತರ ‘ಓಮಿಕ್ರಾನ್’ (Omicron) ಬಗ್ಗೆ ಚಿಂತಿತವಾಗಿದೆ. ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟೆಚ್ಚರ ವಹಿಸಿದೆ. ಮಹಾನಗರವು ಇಂದು ಮತ್ತು ನಾಳೆ ಮುಂಬೈನಲ್ಲಿ ಸೆಕ್ಷನ್ 144 ಅನ್ನು ಜಾರಿಗೊಳಿಸುತ್ತಿದೆ ಮತ್ತು ಸಾಂಕ್ರಾಮಿಕ ರೋಗದ ಹೊಸ ರೂಪವನ್ನು ನಿಗ್ರಹಿಸುತ್ತಿದೆ.

ರ್ಯಾಲಿಗಳು, ಸಾರ್ವಜನಿಕ ಸಭೆಗಳು ಮತ್ತು ವಾಹನಗಳ ಸಂಚಾರಕ್ಕೆ ಎರಡು ದಿನಗಳ ನಿಷೇಧ ಹೇರಲಾಗಿದೆ. ಜನರು ಹೊರಗೆ ತಿರುಗುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿಲಾಗಿದೆ.

ಮಹಾರಾಷ್ಟ್ರದಲ್ಲಿ ಶುಕ್ರವಾರ ಏಳು ಹೊಸ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಈ ಪೈಕಿ ಮೂರು ಮುಂಬೈನಲ್ಲಿ ಮತ್ತು ನಾಲ್ಕು ಪಿಂಪ್ರಿಯಲ್ಲಿವೆ. ಮುಂಬೈನಲ್ಲಿ ಓಮಿಕ್ರಾನ್ ಸೋಂಕಿತರಲ್ಲಿ ಮೂವರು ತಾಂಜಾನಿಯಾ, ಯುಕೆ ಮತ್ತು ದಕ್ಷಿಣ ಆಫ್ರಿಕಾದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೆ ದೇಶಾದ್ಯಂತ 32 ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮಹಾರಾಷ್ಟ್ರದಲ್ಲಿ 17, ರಾಜಸ್ಥಾನದಲ್ಲಿ 9, ಗುಜರಾತ್‌ನಲ್ಲಿ 3, ಕರ್ನಾಟಕದಲ್ಲಿ 2 ಮತ್ತು ದೆಹಲಿಯಲ್ಲಿ ತಲಾ 1 ಇವೆ.

Stay updated with us for all News in Kannada at Facebook | Twitter
Scroll Down To More News Today