ಗ್ರಾಮದ ಮೇಲೆ ನರಿಗಳ ಗುಂಪು ದಾಳಿ, 40 ಮಂದಿ ಗಾಯ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ನರಿಗಳ ಗುಂಪೊಂದು ದಾಳಿ ಮಾಡಿದ ನಂತರ ಸುಮಾರು 40 ಗ್ರಾಮಸ್ಥರು ಗಾಯಗೊಂಡಿದ್ದಾರೆ. ಘಟನೆಯ ನಂತರ ಗ್ರಾಮಸ್ಥರು ಎರಡು ನರಿಗಳನ್ನು ಕೊಂದಿದ್ದಾರೆ.

🌐 Kannada News :

ಮಾಲ್ಡಾ : ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ ನರಿಗಳ ಗುಂಪೊಂದು ದಾಳಿ ಮಾಡಿದ ನಂತರ ಸುಮಾರು 40 ಗ್ರಾಮಸ್ಥರು ಗಾಯಗೊಂಡಿದ್ದಾರೆ. ಘಟನೆಯ ನಂತರ ಗ್ರಾಮಸ್ಥರು ಎರಡು ನರಿಗಳನ್ನು ಕೊಂದಿದ್ದಾರೆ.

ಹೌದು, ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನರಿಗಳ ಗುಂಪೊಂದು ದಾಳಿ ಮಾಡಿದೆ. ಹರಿಶ್ಚಂದ್ರಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹರದನಗರ ಗ್ರಾಮದಲ್ಲಿ ಗುರುವಾರ ನಡೆದ ಘಟನೆಯಲ್ಲಿ 40 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡವರಲ್ಲಿ 20 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಜಾನೆ 15 ರಿಂದ 20 ನರಿಗಳ ಗುಂಪು ಗ್ರಾಮದ ಹಲವಾರು ಮನೆಗಳ ಮೇಲೆ ದಾಳಿ ಮಾಡಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಠಾತ್ ಘಟನೆಯಿಂದ ಗ್ರಾಮಸ್ಥರೆಲ್ಲರೂ ಬೆಚ್ಚಿಬಿದ್ದರು. ಆ ವೇಳೆ ಸಿಕ್ಕಿದ ಎರಡು ನರಿಗಳನ್ನು ಗ್ರಾಮಸ್ಥರು ಕೊಂದರು. ಉಳಿದ ನರಿಗಳು ಪರಾರಿಯಾದವು.

ಗಾಯಾಳು ಗ್ರಾಮಸ್ಥರಿಗೆ ಲಸಿಕೆ ಹಾಗೂ ಚಿಕಿತ್ಸೆಗಾಗಿ ಹರಿಶ್ಚಂದ್ರಾಪುರ ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಲಾಗಿದೆ.

“ನಮ್ಮ ಹಳ್ಳಿಯಲ್ಲಿ ನಾವು ಈ ಹಿಂದೆ ಇಷ್ಟು ನರಿಗಳನ್ನು ನೋಡಿರಲಿಲ್ಲ. ಇಂದು ಬೆಳಿಗ್ಗೆ ಇದ್ದಕ್ಕಿದ್ದಂತೆ 20 ನರಿಗಳು ಅನೇಕ ಗ್ರಾಮಸ್ಥರ ಮೇಲೆ ದಾಳಿ ಮಾಡಿದವು, ಪ್ರಾಣಿಗಳು ಎಲ್ಲಿಂದ ಬಂದವು ಎಂದು ನಮಗೆ ತಿಳಿದಿಲ್ಲ ಎಂದು ಹರ್ದಮ್‌ನಗರದ ನಿವಾಸಿಗಳು ಹೇಳಿದರು.

”ಸುಮಾರು 40 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಗ್ರಾಮಸ್ಥರ ಚಿಕಿತ್ಸೆಗಾಗಿ ವಿಶೇಷ ಶಿಬಿರ ಏರ್ಪಡಿಸಿದ್ದೇವೆ. ಅವರಿಗೆ ಲಸಿಕೆಗಳು ಮತ್ತು ಔಷಧಗಳನ್ನು ನೀಡಲಾಯಿತು. ಸುಮಾರು 15 ಗ್ರಾಮಸ್ಥರ ಗಾಯವು ತುಂಬಾ ಗಂಭೀರವಾಗಿದೆ. ನಾವು ಅವರನ್ನು ಚಂಚೋಲ್ ಆಸ್ಪತ್ರೆಗೆ ಸ್ಥಳಾಂತರಿಸಬೇಕಾಗಬಹುದು ”ಎಂದು ಹರಿಶ್ಚಂದ್ರಾಪುರ ಗ್ರಾಮಾಂತರ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ ಚೋಟನ್ ಮೊಂಡಲ್ ಹೇಳಿದರು.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today