Norovirus : ಕೇರಳದಲ್ಲಿ ಮತ್ತೊಂದು ವೈರಸ್ ಅಟ್ಟಹಾಸ, ಹೊಸ ವೈರಸ್ ಪ್ರಕರಣಗಳು

ಕೇರಳದಲ್ಲಿ (Kerala) ಮತ್ತೊಂದು ವೈರಸ್ ಸಂಚಲನ ಮೂಡಿಸುತ್ತಿದೆ. ವಯನಾಡು ಜಿಲ್ಲೆಯಲ್ಲಿ (Wayanad district) ನೊರೊವೈರಸ್ (Norovirus) ಹರಡುವಿಕೆ ವರದಿಯಾಗಿದೆ. ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ತಿರುವನಂತಪುರಂ (Thiruvananthapuram) : ಕೇರಳದಲ್ಲಿ (Kerala) ಮತ್ತೊಂದು ವೈರಸ್ ಸಂಚಲನ ಮೂಡಿಸುತ್ತಿದೆ. ವಯನಾಡು ಜಿಲ್ಲೆಯಲ್ಲಿ (Wayanad district) ನೊರೊವೈರಸ್ (Norovirus) ಹರಡುವಿಕೆ ವರದಿಯಾಗಿದೆ. ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಶುಕ್ರವಾರ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ವೈತಿರಿ ಸಮೀಪದ ಪೂಕೋಡ್‌ನಲ್ಲಿರುವ ಪಶುವೈದ್ಯಕೀಯ ಕಾಲೇಜಿನ ಹನ್ನೊಂದು ವಿದ್ಯಾರ್ಥಿಗಳು ಕಳೆದ ವಾರ ಸೋಂಕಿಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.

ಪ್ರಾಣಿಗಳ ಮೂಲಕ ಹರಡುವ ನೊರೊವೈರಸ್ (Norovirus), ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುತ್ತದೆ ಎಂದು ಹೇಳಲಾಗುತ್ತದೆ. ರೋಗ ನಿಯಂತ್ರಣಕ್ಕೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ನೊರೊ ವೈರಸ್ ಬಗ್ಗೆ ಜನರು ಆತಂಕ ಪಡಬೇಡಿ ಮತ್ತು ರೋಗಲಕ್ಷಣಗಳ ಬಗ್ಗೆ ಜಾಗರೂಕರಾಗಿರಿ ಎಂದು ವೀಣಾ ಜಾರ್ಜ್ ಸಲಹೆ ನೀಡಿದರು. ಹೊಟ್ಟೆ ಮತ್ತು ಕರುಳಿನ ಉರಿಯೂತ, ಹೊಟ್ಟೆ ನೋವು, ತೀವ್ರವಾದ ವಾಂತಿ, ಅತಿಸಾರ ಮತ್ತು ಜಠರಗರುಳಿನ ಕಾಯಿಲೆಯ ಲಕ್ಷಣಗಳು. ‘ಸೂಕ್ತ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯಿಂದ ನೊರೊವೈರಸ್ ರೋಗವನ್ನು ತ್ವರಿತವಾಗಿ ಗುಣಪಡಿಸಬಹುದು.

ಆದ್ದರಿಂದ ಪ್ರತಿಯೊಬ್ಬರೂ ರೋಗ ಮತ್ತು ಅದರ ತಡೆಗಟ್ಟುವಿಕೆಯ ಬಗ್ಗೆ ತಿಳಿದಿರಬೇಕು. ಕುಡಿಯುವ ನೀರಿನ ಮೂಲಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

Web Title : Another virus outbreak in Kerala, Noro virus cases in Wayanad