ಡ್ರೋನ್ ತಂತ್ರಜ್ಞಾನ ರೈತರಿಗೆ ಸಹಾಯ ಮಾಡುತ್ತದೆ: ಜ್ಯೋತಿರಾದಿತ್ಯ ಸಿಂಧಿಯಾ
ಡ್ರೋನ್ ತಂತ್ರಜ್ಞಾನದಿಂದ ರೈತರಿಗೆ ಸಾಕಷ್ಟು ಸಹಾಯವಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಭೋಪಾಲ್: ಡ್ರೋನ್ ತಂತ್ರಜ್ಞಾನದಿಂದ ರೈತರಿಗೆ ಸಾಕಷ್ಟು ಸಹಾಯವಾಗಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಅವರು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಡ್ರೋನ್ ಮೇಳವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಿಂಧ್ಯಾ ಮಾತನಾಡಿದರು. ರೈತರು ತಮ್ಮ ಹೊಲಗಳಿಗೆ ಡ್ರೋನ್ಗಳ ಮೂಲಕ ಕೀಟನಾಶಕಗಳನ್ನು ಸಿಂಪಡಿಸಬಹುದು ಎಂದು ಹೇಳಿದರು. ಇದು ಕೇವಲ ರಾಜ್ಯ ಕ್ರಾಂತಿಯಲ್ಲ, ಡ್ರೋನ್ ತಂತ್ರಜ್ಞಾನದಿಂದ ಇಡೀ ದೇಶಕ್ಕೆ ಲಾಭವಾಗಲಿದೆ ಎಂದರು.
ಏತನ್ಮಧ್ಯೆ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಗುರುವಾರ ಜಿಲ್ಲೆಯ ಶಂಕರಪುರ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಗ್ವಾಲಿಯರ್ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಅನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಕ್ರಿಕೆಟ್ ಆಡಿದರು. ಹಾಗೆಯೇ ಓಟದಲ್ಲಿ ಪಾಲ್ಗೊಂಡರು..
#WATCH | Union Minister Jyotiraditya Scindia inspected the under-construction Gwalior International Cricket Stadium in Shankarpur area of the district, on 9th Dec. During the inspection, the Minister played cricket with officials & party leaders-workers, & also sprinted with them pic.twitter.com/fIQ7MSE0yl
— ANI (@ANI) December 11, 2021
Follow Us on : Google News | Facebook | Twitter | YouTube