ಗುಜರಾತಿನಲ್ಲೂ ಬುಲ್ಡೋಜರ್ಗಳಿಂದ ಧ್ವಂಸ
ಧಾರ್ಮಿಕ ಹಿಂಸಾಚಾರ ನಡೆದ ಪ್ರದೇಶದಿಂದ ಅನತಿ ದೂರದಲ್ಲಿ ಮನೆಗಳು ಧ್ವಂಸ
ಅಹಮದಾಬಾದ್: ದೆಹಲಿಯ ಜಹಾಂಗೀರ್ಪುರಿ ನಂತರ ಬುಲ್ಡೋಜರ್ ರಾಜಕೀಯ ಇದೀಗ ಮತ್ತೊಂದು ಬಿಜೆಪಿ ಆಡಳಿತದ ಗುಜರಾತ್ಗೆ ಸ್ಥಳಾಂತರಗೊಂಡಿದೆ. ಗುಜರಾತ್ನ ಸಬರ್ಕಾಂತ ಜಿಲ್ಲೆಯ ಹಿಮ್ಮತ್ನಗರದಲ್ಲಿ ಮುನ್ಸಿಪಲ್ ಅಧಿಕಾರಿಗಳು ಅಕ್ರಮ ಕಟ್ಟಡಗಳ ಹೆಸರಿನಲ್ಲಿ ಬುಲ್ಡೋಜರ್ಗಳಿಂದ ನೆಲಸಮ ಮಾಡಲು ಪ್ರಾರಂಭಿಸಿದ್ದಾರೆ.
ಶ್ರೀರಾಮನವಮಿಯಂದು ಧಾರ್ಮಿಕ ಹಿಂಸಾಚಾರದ ಸ್ಥಳದ ಸಮೀಪವಿರುವ ಚಪಾರಿಯಾ ಪ್ರದೇಶದಲ್ಲಿ ಧ್ವಂಸಗೊಳಿಸಲಾಯಿತು. ಇದರಲ್ಲಿ ಮತೀಯ ಹಿಂಸಾಚಾರ ಪ್ರಕರಣದ ಆರೋಪಿಗಳ ಮನೆ, ಅಂಗಡಿಗಳೂ ಸೇರಿವೆ ಎಂದು ತಿಳಿದು ಬಂದಿದೆ.
ಈ ಹಿಂದೆ, ಆನಂದ್ ಜಿಲ್ಲೆಯ ಅಧಿಕಾರಿಗಳು ಖಂಭಾತ್ ಪಟ್ಟಣದಲ್ಲಿ ಧಾರ್ಮಿಕ ಘರ್ಷಣೆಯನ್ನು ಪ್ರಚೋದಿಸುವ ಆರೋಪಿಗಳ ಮನೆಗಳನ್ನು ತೆರವುಗೊಳಿಸಲು ಬುಲ್ಡೋಜರ್ಗಳೊಂದಿಗೆ ಡೆಮಾಲಿಷನ್ ಡ್ರೈವ್ಗಳನ್ನು ನಡೆಸಿದರು.
Follow Us on : Google News | Facebook | Twitter | YouTube