ಮಾಂಸದ ಅಂಗಡಿಗಳು ತೆರವು, ಹೈಕೋರ್ಟ್‌ ಆಕ್ರೋಶ

ಗುಜರಾತ್ ನ ಅಹಮದಾಬಾದ್ ನಲ್ಲಿ ರಸ್ತೆಗಳಲ್ಲಿರುವ ಮಾಂಸದ ಅಂಗಡಿಗಳ ತೆರವಿಗೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಮೇಲೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.

ಅಹಮದಾಬಾದ್ : ಗುಜರಾತ್ ನ ಅಹಮದಾಬಾದ್ ನಲ್ಲಿ ರಸ್ತೆಗಳಲ್ಲಿರುವ ಮಾಂಸದ ಅಂಗಡಿಗಳ ತೆರವಿಗೆ ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಮೇಲೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.

ಜನರು ತಮಗೆ ಬೇಕಾದುದನ್ನು ತಿನ್ನದಂತೆ ತಡೆಯುವುದು ಹೇಗೆ ಎಂದು ಪ್ರಶ್ನಿಸಿದೆ. ಎಎಂಸಿ ನಿರ್ಧಾರವನ್ನು ಪ್ರಶ್ನಿಸಿ ಸುಮಾರು 20 ಬೀದಿ ಬದಿ ವ್ಯಾಪಾರಿಗಳು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರು ಎಎಂಸಿಯ ಕ್ರಮಗಳನ್ನು ದೂಷಿಸಿದ್ದಾರೆ. ‘ನಿಮ್ಮ ನಿಜವಾದ ಸಮಸ್ಯೆ ಏನು? ನಾನು ಮನೆಯ ಹೊರಗೆ ಏನು ತಿನ್ನಬೇಕೆಂದು ನೀವು ಹೇಗೆ ನಿರ್ಧರಿಸುತ್ತೀರಿ? ಜನರು ಇಷ್ಟಪಡುವದನ್ನು ತಿನ್ನುವುದನ್ನು ನೀವು ಹೇಗೆ ತಡೆಯುತ್ತೀರಿ? ಎಂದು ಪ್ರಶ್ನೆಗಳ ಸುರಿಮಳೆಗೈದಿದೆ. ಮಾಂಸ ಮಾರಾಟವನ್ನು ನಿಲ್ಲಿಸುವ ಉದ್ದೇಶವಿದೆ ಎಂದು ಹೇಳದ ಹೈಕೋರ್ಟ್, ಎಎಂಸಿಯ ಕ್ರಮಗಳಲ್ಲಿ ದುರುದ್ದೇಶ ತೋರುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.

Stay updated with us for all News in Kannada at Facebook | Twitter
Scroll Down To More News Today