ಮಧ್ಯಪ್ರದೇಶ ಮುಖ್ಯಮಂತ್ರಿಯನ್ನು ಭೇಟಿಯಾದ ಸಚಿನ್ ತೆಂಡೂಲ್ಕರ್

ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರು ಮಂಗಳವಾರ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದರು ಮತ್ತು ರಾಜ್ಯದಲ್ಲಿ ತಮ್ಮ ಫೌಂಡೇಶನ್ "ಪರಿವಾರ ಫೌಂಡೇಶನ್" ಮಾಡುತ್ತಿರುವ ಕೆಲಸದ ಬಗ್ಗೆ ತಿಳಿಸಿದರು.

ಭೋಪಾಲ್ : ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರು ಮಂಗಳವಾರ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಿದರು ಮತ್ತು ರಾಜ್ಯದಲ್ಲಿ ತಮ್ಮ ಫೌಂಡೇಶನ್ “ಪರಿವಾರ ಫೌಂಡೇಶನ್” ಮಾಡುತ್ತಿರುವ ಕೆಲಸದ ಬಗ್ಗೆ ತಿಳಿಸಿದರು.

ಸೆಹೋರ್ ಜಿಲ್ಲೆಗೆ ಭೇಟಿ ನೀಡಿದ ನಂತರ ತೆಂಡೂಲ್ಕರ್ ಮುಖ್ಯಮಂತ್ರಿ ನಿವಾಸಕ್ಕೆ ತಲುಪಿದರು. ಚೌಹಾಣ್ ಅವರ ಕ್ಷೇತ್ರ ಸೆಹೋರ್ ಜಿಲ್ಲೆಯ ಬುಧ್ನಿ.

ಪ್ರತಿಷ್ಠಾನದ ಎಲ್ಲಾ ಉತ್ತಮ ಕಾರ್ಯಗಳಲ್ಲಿ ರಾಜ್ಯ ಸರ್ಕಾರವು ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದು ಚೌಹಾಣ್ ತೆಂಡೂಲ್ಕರ್ ಅವರಿಗೆ ಭರವಸೆ ನೀಡಿದರು ಎಂದು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅವರು ಕ್ರಿಕೆಟ್ ಕ್ಷೇತ್ರಕ್ಕೆ ತೆಂಡೂಲ್ಕರ್ ಕೊಡುಗೆಯನ್ನು ಶ್ಲಾಘಿಸಿದರು. ಯುವಜನತೆ ಕ್ರಿಕೆಟ್‌ ಕಡೆಗೆ ಒಲವು ಮೂಡಿಸುವಲ್ಲಿ ಅವರ ಕೊಡುಗೆ ಶ್ಲಾಘನೀಯ ಎಂದರು.

ವಿಶ್ವದ ಶ್ರೇಷ್ಠ ಆಟಗಾರ ಸಚಿನ್ 16 ನವೆಂಬರ್ 2013 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರು.