ಹರಿಯಾಣದ ಕರ್ನಲ್ನಲ್ಲಿ ನಾಲ್ವರು ಶಂಕಿತ ಭಯೋತ್ಪಾದಕರ ಬಂಧನ
ಹರಿಯಾಣದ ಕರ್ನಲ್ ಪ್ರದೇಶದಲ್ಲಿ ನಾಲ್ವರು ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ
Haryana, India News (ಹರಿಯಾಣ) ಹರಿಯಾಣದ ಕರ್ನಲ್ ಪ್ರದೇಶದಲ್ಲಿ ನಾಲ್ವರು ಉಗ್ರರನ್ನು (Terrorists) ಪೊಲೀಸರು ಬಂಧಿಸಿದ್ದಾರೆ. ಹರಿಯಾಣ ಪೊಲೀಸರು (Haryana Police) ಅವರ ಬಳಿಯಿಂದ ಭಾರೀ ಪ್ರಮಾಣದ ಬುಲೆಟ್ಗಳು, ಗನ್ಪೌಡರ್ ಮತ್ತು ಆರ್ಡಿಎಕ್ಸ್ ಅನ್ನು ವಶಪಡಿಸಿಕೊಂಡಿದ್ದಾರೆ. ಅವರ ಬಳಿ ಇಷ್ಟು ದೊಡ್ಡ ಪ್ರಮಾಣದ ಗುಂಡುಗಳು ಮತ್ತು ಇತರ ಸ್ಫೋಟಕಗಳು ಕಂಡು ಪೊಲೀಸರು ಆಶರ್ಯಗೊಂಡಿದ್ದಾರೆ ಹಾಗೂ ಅಲರ್ಟ್ ಆಗಿದ್ದಾರೆ.
ಈ ನಾಲ್ವರು ಪಂಜಾಬ್ ಮೂಲದ ಉಗ್ರಗಾಮಿ ಸಂಘಟನೆಯಾದ ಬಬ್ಬರ್ ಖಾಲ್ಸಾ ಇಂಟರ್ನ್ಯಾಶನಲ್ (ಬಿಕೆಐ) ಸದಸ್ಯರಾಗಿದ್ದಾರೆ ಎಂದು ಹೇಳಲಾಗಿದೆ. ಅವರನ್ನು ಬಂಧಿಸಲು ಪಂಜಾಬ್ ಐಬಿ ಪೊಲೀಸರು ಮತ್ತು ಹರಿಯಾಣ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು.
ನಾಲ್ವರು ಶಂಕಿತ ಉಗ್ರರು 20ರಿಂದ 25 ವರ್ಷದೊಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ. ಪಂಜಾಬ್ನಿಂದ ನಾಂದೇಡ್ಗೆ ತೆರಳುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಹರಿಯಾಣದ ಬಸ್ತಾಡಾ ಟೋಲ್ ಪ್ಲಾಜಾದಲ್ಲಿ ಇನ್ನೋವಾ ನಿಲ್ಲಿಸಿ ಪೊಲೀಸರು ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
4 Suspected Terrorists Arrested In Karnal Haryana
Follow Us on : Google News | Facebook | Twitter | YouTube