ಮನೆಯ ಬಾತ್ರೂಮ್ನಲ್ಲಿ 60 ಹಾವುಗಳು ಪತ್ತೆ
ಉತ್ತರ ಪ್ರದೇಶದ ಮನೆಯಯೊಂದರ ಬಾತ್ರೂಮ್ನಲ್ಲಿ ಬರೋಬ್ಬರಿ 60 ಹಾವುಗಳು ಪತ್ತೆಯಾಗಿವೆ
ಲಖನೌ: ಮನೆಯ ವರಾಂಡದಲ್ಲಿದ್ದ ಬಾತ್ ರೂಂನಲ್ಲಿ (Bathroom) ಒಂದಲ್ಲ ಎರಡಲ್ಲ 60 ಹಾವುಗಳು (Snakes) ಪತ್ತೆಯಾಗಿವೆ. ಈ ಹಾವುಗಳನ್ನು ಕಂಡ ಸ್ಥಳೀಯರು ಭಯಭೀತರಾಗಿದ್ದರು. ಸಾಮಾನ್ಯವಾಗಿ ಒಂದು ಹಾವು ಕಂಡರೆ ಒಂದು ಮೈಲು ದೂರ ಓಡೋ ನಾವು ಇಷ್ಟೊಂದು ಹಾವುಗಳನ್ನು ಕಂಡರೆ ಅಷ್ಟೇ…
ವಿವರಗಳಿಗೆ ಹೋಗುವುದಾದರೆ.. ಉತ್ತರ ಪ್ರದೇಶದ ಮುಜಾಫರ್ನಗರ ಜಿಲ್ಲೆಯ ಮನೆಯೊಂದರ ಅಂಗಳದಲ್ಲಿ ಮೊದಲು ಎರಡು ಹಾವುಗಳು ಕಾಣಿಸಿಕೊಂಡಿವೆ. ಈ ಬಗ್ಗೆ ಸ್ಥಳೀಯರು ಆತಂಕಗೊಂಡರು.
ಬಾತ್ ರೂಂ ನೆಲದಿಂದ ಹಾವುಗಳು ಬಂದಿರುವುದು ಮನೆಯ ಮಾಲೀಕರಿಗೆ ತಿಳಿಯಿತು. ಈ ಪ್ರಕ್ರಿಯೆಯಲ್ಲಿ ಹಾವುಗಳನ್ನು ಹಿಡಿಯುವ ವ್ಯಕ್ತಿಯನ್ನು ಕರೆಯಿಸಿ, ಫ್ಲೋರ್ ತೆಗೆದು ನೋಡಿದರೆ… ಬಾತ್ ರೂಂನಲ್ಲಿ 60 ಹಾವುಗಳು ಪತ್ತೆಯಾದವು. ಒಟ್ಟು 75 ಮೊಟ್ಟೆಗಳು ಇರುವುದಾಗಿ ತಿಳಿದುಬಂದಿದೆ. ಈ ಎಲ್ಲಾ ಹಾವುಗಳನ್ನು ಸಮೀಪದ ಅರಣ್ಯದಲ್ಲಿ ಬಿಡಲಾಗಿದೆ.
60 Snakes Found In Bathroom In Uttar Pradesh
Follow Us on : Google News | Facebook | Twitter | YouTube