50 ಲಕ್ಷ ಲಂಚ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಅನುಯಾಯಿ ಬಂಧನ
ಲೋಕಸಭೆ ಸಂಸದ ಕಾರ್ತಿ ಚಿದಂಬರಂ ಅವರ ನಿಕಟವರ್ತಿ ಎಸ್ ಭಾಸ್ಕರ್ ರಾಮನ್ ಅವರನ್ನು ಸಿಬಿಐ ಇಂದು ಬಂಧಿಸಿದೆ.
ನವದೆಹಲಿ: ಲೋಕಸಭೆ ಸಂಸದ ಕಾರ್ತಿ ಚಿದಂಬರಂ ಅವರ ನಿಕಟವರ್ತಿ ಎಸ್ ಭಾಸ್ಕರ್ ರಾಮನ್ ಅವರನ್ನು ಸಿಬಿಐ ಇಂದು ಬಂಧಿಸಿದೆ. ಪಂಜಾಬ್ನ ತಲ್ವಾಂಡಿ ಸಾಬು ಪವರ್ ಪ್ಲಾಂಟ್ನಲ್ಲಿ ಕೆಲಸ ಮಾಡುತ್ತಿರುವ 263 ಚೀನೀಯರಿಗೆ ವೀಸಾ ಪಡೆಯಲು 50 ಲಕ್ಷ ರೂಪಾಯಿ ಲಂಚ ಪಡೆದ ಆರೋಪ ಅವರ ಮೇಲಿದೆ.
2011ರಲ್ಲಿ ಈ ಘಟನೆ ನಡೆದಿತ್ತು. ಕಾರ್ತಿ ಚಿದಂಬರಂ ಅವರ ತಂದೆ ಪಿ.ಚಿದಂಬರಂ ಕೇಂದ್ರ ಸಚಿವರಾಗಿದ್ದಾಗ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ ಭಾಸ್ಕರ್ ರಾಮನ್ ಅವರನ್ನು ಸಿಬಿಐ ಬಂಧಿಸಿದೆ ಎಂದು ತಿಳಿದುಬಂದಿದೆ. ಆದರೆ, ಇಂದು ಬೆಳಗ್ಗೆ ಅವರನ್ನು ಬಂಧಿಸಲಾಗಿದೆ. ಭಾಸ್ಕರ್ ರಾಮನ್ ಮೂಲಕ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ವಿಕಾಶ್ ಎಂಬ ವ್ಯಕ್ತಿ ಕಾರ್ತಿಯನ್ನು ಆಶ್ರಯಿಸಿದ್ದ ಎಂಬ ಆರೋಪಗಳಿವೆ.
Cbi Arrests S Bhaskararaman Close Associate Of Karti Chidambaram In Rs 50 Lakh Bribery Case
Follow Us on : Google News | Facebook | Twitter | YouTube