ಫೇಸ್ ಬುಕ್ ನಲ್ಲಿ ಜ್ಞಾನವಾಪಿ ಪೋಸ್ಟ್, ದೆಹಲಿ ಪ್ರೊಫೆಸರ್ ಬಂಧನ
ವಾರಣಾಸಿ ಜ್ಞಾನವಾಪಿ ಕುರಿತು ಫೇಸ್ಬುಕ್ ಪೋಸ್ಟ್ ಮಾಡಿದ ದೆಹಲಿಯ ಪ್ರೊಫೆಸರ್ ರತನ್ ಲಾಲ್ ಬಂಧನ
Delhi, India (ನವದೆಹಲಿ): ವಾರಣಾಸಿಯ ಜ್ಞಾನವಾಪಿ (Varanasi’s Gyanvapi) ಮಸೀದಿಯಲ್ಲಿ ಇತ್ತೀಚೆಗೆ ನಡೆದ ಸಮೀಕ್ಷೆಯಲ್ಲಿ ಶಿವಲಿಂಗ ಇರುವುದು ಬೆಳಕಿಗೆ ಬಂದಿದೆ. ಆದರೆ, ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನ ಸಹ ಪ್ರಾಧ್ಯಾಪಕ ರತನ್ ಲಾಲ್ (Professor Ratan Lal) ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ (Social Media) ವಿವಾದಾತ್ಮಕ ಕಾಮೆಂಟ್ಗಳನ್ನು ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಪ್ರೊಫೆಸರ್ ರತನ್ ಲಾಲ್ ಅವರನ್ನು ಬಂಧಿಸಲಾಗಿದೆ (Arrested). ಐಪಿಸಿ 153ಎ ಮತ್ತು 295ಎ ಅಡಿಯಲ್ಲಿ ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ ಎಂದು ದೆಹಲಿ ಸೈಬರ್ ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ವಕೀಲ ವಿನೀತ್ ಜಿಂದಾಲ್ ನೀಡಿದ ದೂರಿನ ಆಧಾರದ ಮೇಲೆ ಮಂಗಳವಾರ ರಾತ್ರಿ ಲಾಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪ್ರೊಫೆಸರ್ ನೀಡಿರುವ ಹೇಳಿಕೆ ಪ್ರಚೋದನಕಾರಿಯಾಗಿದೆ ಎಂದು ವಕೀಲರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
Delhi Professor Ratan Lal Arrested Over Facebook Post On Varanasi’s Gyanvapi
Follow Us on : Google News | Facebook | Twitter | YouTube