ದೆಹಲಿಯಲ್ಲಿ ಮುಂದುವರೆದಿದೆ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯ..!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯ ಮುಂದುವರಿದಿದೆ. ಬುಲ್ಡೋಜರ್‌ಗಳು ಮತ್ತೆ ಬೀದಿಗಿಳಿದಿವೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯ ಮುಂದುವರಿದಿದೆ. ಬುಲ್ಡೋಜರ್‌ಗಳು ಮತ್ತೆ ಬೀದಿಗಿಳಿದಿವೆ. ದಕ್ಷಿಣ ದೆಹಲಿ ಮುನ್ಸಿಪಾಲಿಟಿಯ ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿ ಇಂದು ಬೆಳಗ್ಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ವೇಳೆ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿದರು.

ದಕ್ಷಿಣ ದೆಹಲಿಯ ಹಲವು ಭಾಗಗಳಲ್ಲಿ ಧ್ವಂಸ ಕಾರ್ಯಾಚರಣೆ ಮುಂದುವರಿದಿದೆ. ಮೇ 4 ರಿಂದ ಮೇ 13 ರವರೆಗೆ ಅಕ್ರಮ ಕಟ್ಟಡಗಳನ್ನು ತೆಗೆದುಹಾಕಲಾಗುವುದು. ಉತ್ತರ ದೆಹಲಿ ಮುನ್ಸಿಪಾಲಿಟಿ ವ್ಯಾಪ್ತಿಯ ಮಂಗೋಲ್‌ಪುರಿಯಲ್ಲಿಯೂ ಅಕ್ರಮ ಕಟ್ಟಡಗಳ ಧ್ವಂಸ ಕಾರ್ಯ ಮುಂದುವರಿದಿದೆ.

ಅಲ್ಲಿ ಬುಲ್ಡೋಜರ್‌ಗಳೊಂದಿಗೆ ದ್ವಾಂಸ ಕಾರ್ಯ ನಡೆದಿದೆ. ಸೋಮವಾರವೂ ಶಾಹೀನ್ ಭಾಗ್‌ನಲ್ಲಿ ಬುಲ್ಡೋಜರ್‌ಗಳು ಫೀಲ್ಡಿಗಿಳಿದಿವೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ ಜಹಾಂಗೀರಪುರಿಯಲ್ಲಿಯೂ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲಾಗಿತ್ತು.

Demolition Drive Continued Today In South North Delhi Municipal Corporation

Follow Us on : Google News | Facebook | Twitter | YouTube