Nepal Plane Crash Update: ನ್ಯಾಯಾಲಯದ ಆದೇಶದಂತೆ 10 ದಿನಗಳ ರಜೆಗಾಗಿ ನೇಪಾಳಕ್ಕೆ ತೆರಳಿದ್ದ ಕುಟುಂಬ
Nepal Plane Crash Update – ಕಠ್ಮಂಡು: ನೇಪಾಳದ ಖಾಸಗಿ ವಿಮಾನಯಾನ ಸಂಸ್ಥೆಯು ನಿರ್ವಹಿಸುತ್ತಿರುವ ತಾರಾ ಏರ್ ವಿಮಾನ, ಪ್ರವಾಸಿ ನಗರವಾದ ಪೋಖರಾದಿಂದ ನಾಲ್ಕು ಭಾರತೀಯರು ಸೇರಿದಂತೆ 22 ಜನರೊಂದಿಗೆ ಹೊರಟ ಕೆಲವೇ ನಿಮಿಷಗಳಲ್ಲಿ ನಾಪತ್ತೆಯಾಗಿತ್ತು.
ನಿನ್ನೆ ನೇಪಾಳದಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿದ್ದ 22 ಜನರಲ್ಲಿ, ವಿಚ್ಛೇದಿತ ಭಾರತೀಯ ದಂಪತಿಗಳು ಮತ್ತು ಅವರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ವಿಮಾನ ಏರಿದ 4 ಭಾರತೀಯರ ಹೆಸರನ್ನು ಏರ್‌ಲೈನ್ಸ್ ಬಿಡುಗಡೆ ಮಾಡಿದೆ. ಅವರೆಂದರೆ ಅಶೋಕ್ ಕುಮಾರ್ ತ್ರಿಪಾಠಿ, ಅವರ ಪತ್ನಿ ವೈಭವಿ ಪಾಂಡೇಕರ್, ಮಗ ಧನುಷ್ ತ್ರಿಪಾಠಿ ಮತ್ತು ಮಗಳು ರಿತಿಕಾ ತ್ರಿಪಾಠಿ.
ಒಂದೇ ಕುಟುಂಬದ ನಾಲ್ವರು ದುರಂತವಾಗಿ ಸಾವನ್ನಪ್ಪಿದ್ದಾರೆ. ಮಹಿಳೆ ಮತ್ತು ಮಕ್ಕಳು ಥಾಣೆಯಲ್ಲಿ ವಾಸಿಸುತ್ತಿದ್ದರೆ, ಆಕೆಯ ಮಾಜಿ ಪತಿ ಒಡಿಶಾದಲ್ಲಿ ವಾಸಿಸುತ್ತಿದ್ದರು.
ವಿಚ್ಛೇದನದ ನಂತರ ವೈಭವ್-ಅಶೋಕ್ ಕುಮಾರ್ ದಂಪತಿಗಳು ಪ್ರತಿ ವರ್ಷ 10 ದಿನ ಒಟ್ಟಿಗೆ ಇರಬೇಕೆಂಬ ನ್ಯಾಯಾಲಯದ ಆದೇಶದಂತೆ ಈ ವರ್ಷ 10 ದಿನಗಳ ರಜೆಗಾಗಿ ನೇಪಾಳಕ್ಕೆ ಪ್ರಯಾಣ ಬೆಳೆಸಿದ್ದರು.
ವಿಮಾನದಲ್ಲಿ 4 ಭಾರತೀಯರು, 2 ಜರ್ಮನ್ನರು, 13 ನೇಪಾಳದ ಪ್ರಯಾಣಿಕರು ಮತ್ತು 3 ಸಿಬ್ಬಂದಿ ಇದ್ದರು. ಇದುವರೆಗೆ 21 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಉಳಿದ ಒಬ್ಬರ ದೇಹವನ್ನು ಹುಡುಕುವಲ್ಲಿ ರಕ್ಷಣಾ ತಂಡ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
divorced Indian couple and their two children have been reported dead in Nepal Plane Crash