Qutub Minar, ಕುತುಬ್ ಮಿನಾರ್ ನಲ್ಲಿ ಉತ್ಖನನ?
Qutub Minar: ಕುತುಬ್ ಮಿನಾರ್ನಲ್ಲಿ ಉತ್ಖನನ ನಡೆಸಲಾಗುತ್ತದೆ ಎಂಬ ಸುದ್ದಿ ಒಂದು ವದಂತಿ
Delhi, India (ನವದೆಹಲಿ) : ದಿಲ್ಲಿಯ ಕುತುಬ್ ಮಿನಾರ್ನಲ್ಲಿ ಉತ್ಖನನ (Excavations At Qutub Minar) ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಕೇಂದ್ರ ಸಂಸ್ಕೃತಿ ಸಚಿವಾಲಯ ಸೂಚಿಸಿದೆ ಎಂದು ಭಾನುವಾರ ವರದಿಗಳು ತಿಳಿಸಿವೆ. ಸಚಿವಾಲಯದ ಕಾರ್ಯದರ್ಶಿ ಗೋವಿಂದ್ ಮೋಹನ್ ಶನಿವಾರ ಕುತುಬ್ ಮಿನಾರ್ ಪ್ರದೇಶಕ್ಕೆ ಭೇಟಿ ನೀಡಿದರು.
ಕುತುಬ್ ಮಿನಾರ್ ಅನ್ನು ಕುತ್ಬುದ್ದೀನ್ ಇಬ್ನ್ ಬಕರ್ ನಿರ್ಮಿಸಿದನೇ? ಅಥವಾ ಇದನ್ನು ಚಂದ್ರಗುಪ್ತ ರಾಜ ವಿಕ್ರಮಾದಿತ್ಯ ನಿರ್ಮಿಸಿದನೇ? ಎಂಬುದನ್ನು ಖಚಿತಪಡಿಸಿಕೊಳ್ಳಲು ಉತ್ಖನನ ನಡೆಸುವಂತೆ ಎಎಸ್ಐಗೆ ಆದೇಶಿಸಲಾಗಿದೆ ಎಂದು ಸುದ್ದಿ ಹೊರಬಿದ್ದಿದೆ.
ಆದರೆ, ಮಾಧ್ಯಮ ವರದಿಗಳನ್ನು ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ನಿರಾಕರಿಸಿದ್ದಾರೆ. ಹಿಂದುತ್ವ ಸಂಘಟನೆಗಳ ಪ್ರಕಾರ, ಕುತುಬ್ ಮಿನಾರ್ ಒಂದು ಕಾಲದಲ್ಲಿ ವಿಷ್ಣುವಿನ ಸ್ತಂಭವಾಗಿತ್ತು ಮತ್ತು ಅದರ ಕೆಲವು ಭಾಗಗಳನ್ನು ಕೆಡವಿ ಕುತುಬ್ ಮಿನಾರ್ ಆಗಿ ಪರಿವರ್ತಿಸಲಾಯಿತು…. ಎನ್ನುವುದಾಗಿದೆ.
Excavations At Qutub Minar A Rumor
Follow Us on : Google News | Facebook | Twitter | YouTube