India Corona Cases, ದೇಶದಲ್ಲಿ ಹೊಸದಾಗಿ 3545 ಕೊರೊನಾ ಪ್ರಕರಣಗಳು
India Corona Cases, ಇಂದು 3545 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದು ನಿನ್ನೆಗಿಂತ ಶೇ.8.2ರಷ್ಟು ಹೆಚ್ಚಾಗಿದೆ.
Delhi, India News (ನವದೆಹಲಿ): ದೇಶದಲ್ಲಿ ಕೊರೊನಾ ಪ್ರಕರಣಗಳು (Corona Cases) ಹೆಚ್ಚುತ್ತಲೇ ಇವೆ. ಗುರುವಾರ 3275 ಪಾಸಿಟಿವ್ ಪ್ರಕರಣಗಳು (Covid Positive) ವರದಿಯಾಗಿದ್ದು, ಇಂದು 3545 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದು ನಿನ್ನೆಗಿಂತ ಶೇ.8.2ರಷ್ಟು ಹೆಚ್ಚಾಗಿದೆ.
ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 4,30,94,938 ಕ್ಕೆ ತಲುಪಿದೆ. ಈ ಪೈಕಿ 4,25,51,248 ಮಂದಿ ಚೇತರಿಸಿಕೊಂಡಿದ್ದಾರೆ. ಇನ್ನೂ 5,24,002 ಮಂದಿ ಸಾವನ್ನಪ್ಪಿದ್ದಾರೆ ಮತ್ತು 19,688 ಪ್ರಕರಣಗಳು ಸಕ್ರಿಯವಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ಕಳೆದ 24 ಗಂಟೆಗಳಲ್ಲಿ 27 ಜನರು ಮೃತಪಟ್ಟಿದ್ದು 3549 ಜನರು ಚೇತರಿಸಿಕೊಂಡಿದ್ದಾರೆ.
ಹೊಸದಾಗಿ ದಾಖಲಾದ ಪ್ರಕರಣಗಳಲ್ಲಿ 79.82 ಪ್ರಕರಣಗಳು ಐದು ರಾಜ್ಯಗಳಲ್ಲಿ ಮಾತ್ರ ವರದಿಯಾಗಿದ್ದು, ಅವುಗಳಲ್ಲಿ 1365 (ಶೇ. 38.5) ದೆಹಲಿಯಲ್ಲಿ, 534 ಹರಿಯಾಣದಲ್ಲಿ, 356 ಉತ್ತರ ಪ್ರದೇಶದಲ್ಲಿ, 342 ಕೇರಳದಲ್ಲಿ ಮತ್ತು 233 ಮಹಾರಾಷ್ಟ್ರದಲ್ಲಿ ವರದಿಯಾಗಿದೆ.
ಇದುವರೆಗೆ 1,89,81,52,695 ಲಸಿಕೆ ಡೋಸ್ಗಳನ್ನು (Corona Vaccine) ವಿತರಿಸಲಾಗಿದೆ. ಈ ಪೈಕಿ ಗುರುವಾರ 16,59,843 ಮಂದಿಗೆ ಲಸಿಕೆ ಹಾಕಲಾಗಿದೆ. ಅದೇ ರೀತಿ ನಿನ್ನೆ ಒಂದೇ ದಿನದಲ್ಲಿ 4,23,430 ಮಂದಿಗೆ ಕೊರೊನಾ ಪರೀಕ್ಷೆ (Corona Test) ನಡೆಸಲಾಗಿದೆ.
India Reports 3545 New Corona Cases
Follow Us on : Google News | Facebook | Twitter | YouTube