ಜಿಗ್ನೇಶ್ ಮೇವಾನಿಗೆ ಮೂರು ತಿಂಗಳ ಜೈಲು ಶಿಕ್ಷೆ

ಕೆಲವು ದಿನಗಳ ಹಿಂದೆ ಅನುಮತಿಯಿಲ್ಲದೆ ನಡೆದ ರ್ಯಾಲಿಯಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. 

ಕೆಲವು ದಿನಗಳ ಹಿಂದೆ ಅನುಮತಿಯಿಲ್ಲದೆ ನಡೆದ ರ್ಯಾಲಿಯಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.

ಮೇವಾನಿ ಮತ್ತು ರ್ಯಾಲಿಯಲ್ಲಿ ಭಾಗಿಯಾಗಿದ್ದ ಇತರ ಒಂಬತ್ತು ಜನರನ್ನು ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿತು. ಎಲ್ಲರಿಗೂ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು.

ತಲಾ 1000 ರೂ. ದಂಡ ಸಹ ವಿಧಿಸಿದೆ, ಶಿಕ್ಷೆಗೊಳಗಾದವರಲ್ಲಿ ಎನ್‌ಸಿಪಿಯ ರೇಷ್ಮಾ ಪಟೇಲ್ ಕೂಡ ಸೇರಿದ್ದಾರೆ. ಜುಲೈ 2017 ರಲ್ಲಿ ಮೇವಾನಿ ಅವರು ‘ಫ್ರೀಡಮ್ ಮಾರ್ಚ್’ ಅನ್ನು ಆಯೋಜಿಸಿದರು.

ಇದಕ್ಕೆ ಅನುಮತಿ ಇಲ್ಲದ ಕಾರಣ 12 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರಲ್ಲಿ ಒಬ್ಬರು ಅದಾಗಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದಾನೆ. ಉಳಿದ ಹತ್ತು ಮಂದಿ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ.

Jignesh Mevani Gets Three Months Jail Term Over 2017 Mehsana Rally In Gujarat

Follow Us on : Google News | Facebook | Twitter | YouTube