ಉಗ್ರರಿಗೆ ಸಿಮ್ ಕಾರ್ಡ್ ವಿತರಣೆ, ಜಮ್ಮು ಮತ್ತು ಕಾಶ್ಮೀರದ 19 ಸ್ಥಳಗಳಲ್ಲಿ ದಾಳಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಮೊಬೈಲ್ ಸಿಮ್ ಕಾರ್ಡ್ ಮಾರಾಟಗಾರರು ವಂಚನೆಯ ಸಿಮ್ ಕಾರ್ಡ್ ಮಾರಾಟದಲ್ಲಿ ತೊಡಗಿದ್ದಾರೆ.
ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಮೊಬೈಲ್ ಸಿಮ್ ಕಾರ್ಡ್ ಮಾರಾಟಗಾರರು ವಂಚನೆಯ ಸಿಮ್ ಕಾರ್ಡ್ ಮಾರಾಟದಲ್ಲಿ ತೊಡಗಿದ್ದಾರೆ. ಕಾಲ್ಪನಿಕ ಹೆಸರಿನಲ್ಲಿ ಸಿಮ್ ಕಾರ್ಡ್ ನೀಡುವುದು, ಗುರುತಿನ ದಾಖಲೆಗಳನ್ನು ಬಳಸಿಕೊಂಡು ಮತ್ತೊಬ್ಬರಿಗೆ ಸಿಮ್ ಕಾರ್ಡ್ ನೀಡುವುದು ಮುಂತಾದ ಹಗರಣಗಳಲ್ಲಿ ಭಾಗಿಯಾಗಿದ್ದಾರೆ.
ಈ ಸಿಮ್ ಕಾರ್ಡ್ಗಳನ್ನು ಭಯೋತ್ಪಾದಕರು, ಅವರ ಸಹಾಯಕರು, ಮಾದಕವಸ್ತು ಕಳ್ಳಸಾಗಣೆದಾರರು ಮತ್ತು ಇತರ ಅಪರಾಧಿಗಳು ಬಳಸಿದ್ದಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪ್ರಕರಣಗಳಲ್ಲಿ ಹೆಚ್ಚುವರಿ ಸಾಕ್ಷ್ಯಗಳನ್ನು ಸಂಗ್ರಹಿಸಲು ರಾಜ್ಯ ಗುಪ್ತಚರ ಸಂಸ್ಥೆ (ಎಸ್ಐಎ) ಅಧಿಕಾರಿಗಳು ನಿನ್ನೆ ಜಮ್ಮು ಮತ್ತು ಕಾಶ್ಮೀರದಾದ್ಯಂತ 19 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ಅಧಿಕಾರಿಯೊಬ್ಬರು, “ಪಾಕಿಸ್ತಾನದಲ್ಲಿರುವ ತಮ್ಮ ಮಾಸ್ಟರ್ಗಳು ಮತ್ತು ಗಡಿಯುದ್ದಕ್ಕೂ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಅವರ ಕಾರ್ಯಕರ್ತರೊಂದಿಗೆ ಸಂವಹನ ನಡೆಸಲು ಕೆಲವು ಸಿಮ್ ಕಾರ್ಡ್ಗಳನ್ನು ಉಗ್ರರು ಖರೀದಿಸಿದ್ದಾರೆ. ಇದಕ್ಕೆ 3 ಪ್ರಕರಣಗಳಲ್ಲಿ ಬಲವಾದ ಪ್ರಾಥಮಿಕ ಪುರಾವೆಗಳಿವೆ, ”ಎಂದು ಹೇಳಿದರು.
Follow Us on : Google News | Facebook | Twitter | YouTube