ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಿದ ತಮಿಳುನಾಡು ಸಿಎಂ
ತಮಿಳುನಾಡಿನ ಡಿಎಂಕೆ ಸರ್ಕಾರಕ್ಕೆ ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯದ ಸಿಎಂ ಸ್ಟಾಲಿನ್ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಬೆಳೆಸಿದರು.
ಚೆನ್ನೈ: ತಮಿಳುನಾಡಿನ ಡಿಎಂಕೆ ಸರ್ಕಾರಕ್ಕೆ ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯದ ಸಿಎಂ ಸ್ಟಾಲಿನ್ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಬೆಳೆಸಿದರು. ಸ್ಟಾಲಿನ್ ಅವರು ಮರೀನಾ ಬೀಚ್ನಲ್ಲಿರುವ ಅಣ್ಣಾ ಸ್ಮಾರಕ, ಕರುಣಾನಿಧಿ ಸ್ಮಾರಕವನ್ನು ತಲುಪಲು ಬಸ್ನಲ್ಲಿ ಪ್ರಯಾಣಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಬಸ್ಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು. ಪ್ರಯಾಣಿಕರನ್ನು ಕಂಡಕ್ಟರ್ ಅನ್ನು.. ಬಸ್ ಸೌಕರ್ಯಗಳ ಬಗ್ಗೆ ವಿಚಾರಿಸಿದರು.
ಮರೀನಾ ಬೀಚ್ ಗೆ ಬಸ್ ನಲ್ಲಿ ಆಗಮಿಸಿದ ಸಿಎಂ ಸ್ಟಾಲಿನ್ ಅಲ್ಲಿನ ಮಾಜಿ ಸಿಎಂ ಕರುಣಾನಿಧಿ ಸ್ಮಾರಕಕ್ಕೆ ತೆರಳಿ ನಮನ ಸಲ್ಲಿಸಿದರು. ಡಿಎಂಕೆ ಸಂಸ್ಥಾಪಕ ಮತ್ತು ಮಾಜಿ ಸಿಎಂ ಸಿಎನ್ ಅಣ್ಣಾದೊರೈ ಅವರು ಸ್ಮಾರಕಕ್ಕೆ ಪುಷ್ಪಗುಚ್ಛ ನೀಡಿ ಗೌರವ ಸಲ್ಲಿಸಿದರು.
ನಂತರ ವಿಧಾನಸಭೆಯಲ್ಲಿ ಸಿಎಂ ಸ್ಟಾಲಿನ್ ಐದು ಪ್ರಮುಖ ಘೋಷಣೆಗಳನ್ನು ಮಾಡಿದರು. ಸರ್ಕಾರಿ ಶಾಲೆಗಳಲ್ಲಿ 1 ರಿಂದ 5 ನೇ ತರಗತಿ ಮಕ್ಕಳಿಗೆ ಉಪಹಾರ ಯೋಜನೆ ಘೋಷಣೆ. ಸ್ಕೂಲ್ಸ್ ಆಫ್ ಎಕ್ಸಲೆನ್ಸ್, ಮೆಡಿಕಲ್ ಚಾಯ್ಸ್ ಮತ್ತು ಅರ್ಬನ್ ಸೆಂಟರ್ಗಳಲ್ಲಿ PHC ಗಳ ಸ್ಥಾಪನೆಯ ಕುರಿತು ಘೋಷಿಸಲಾಗಿದೆ. ಎಲ್ಲ ಕ್ಷೇತ್ರಗಳಲ್ಲೂ ಸಿಎಂ ಯೋಜನೆ ಘೋಷಣೆಯಾಗಿದೆ.
Tamil nadu Cm Stalin Traveled In Government Bus In Chennai
Follow Us on : Google News | Facebook | Twitter | YouTube