ಚಾರ್ ಧಾಮ್ ದೇಗುಲಗಳಲ್ಲಿ ವಿಐಪಿ ದರ್ಶನ ರದ್ದು
ಉತ್ತರಾಖಂಡದ ಚಾರ್ ಧಾಮ್ ದೇಗುಲಗಳಲ್ಲಿ ವಿಐಪಿ ದರ್ಶನವನ್ನು ರದ್ದುಗೊಳಿಸಲಾಗಿದೆ.
ಡೆಹ್ರಾಡೂನ್: ಉತ್ತರಾಖಂಡದ ಚಾರ್ ಧಾಮ್ ದೇಗುಲಗಳಲ್ಲಿ ವಿಐಪಿ ದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ರಾಜ್ಯ ಸಿಎಂ ಪುಷ್ಕರ್ ಸಿಂಗ್ ಧಾಮಿ ಶುಕ್ರವಾರ ಹೇಳಿದ್ದಾರೆ. ಈ ಕುರಿತು ಆದೇಶ ಹೊರಡಿಸಲಾಗಿದೆ ಎಂದು ತಿಳಿದುಬಂದಿದೆ.
‘ಚಾರ್ ಥಾಮ್ಸ್ನಲ್ಲಿ ವಿಐಪಿ ಸ್ಕ್ರೀನಿಂಗ್ ನೀತಿಯನ್ನು ನಾವು ರದ್ದುಗೊಳಿಸುತ್ತಿದ್ದೇವೆ. ಇನ್ನು ಮುಂದೆ ಚಾರ್ ಧಾಮ್ ಭೇಟಿಗೆ ವಿಶೇಷ ವಿಭಾಗಗಳು ಅಥವಾ ವಿಐಪಿ ವ್ಯವಸ್ಥೆ ಇರುವುದಿಲ್ಲ. ಎಲ್ಲರಿಗೂ ಒಂದೇ ರೀತಿ ಮಾಡಿದ್ದೇವೆ’ ಎಂದು ಮಾಧ್ಯಮಗಳಿಗೆ ತಿಳಿಸಿದರು.
ಚಾರ್ ಧಾಮ್ ದೇಗುಲಗಳಲ್ಲಿ, ಕೆಲವು ವಿಐಪಿ ಯಾತ್ರಿಕರು ಉದ್ದದ ಸರತಿ ಸಾಲುಗಳನ್ನು ದಾಟುವ ಅಭ್ಯಾಸವನ್ನು ಕೊನೆಗೊಳಿಸಿದ್ದೇವೆ ಎಂದು ಹೇಳಿದರು. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನಿಯಮಾನುಸಾರ ಚಾರ್ ಧಾಮ್ ಯಾತ್ರೆಯನ್ನು ವ್ಯವಸ್ಥಿತವಾಗಿ ನಡೆಸುವಂತೆ ಪೊಲೀಸ್ ಹಾಗೂ ಆಡಳಿತಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
Vip Darshans At Uttarakhands Char Dham Shrines Abolished Says Pushkar Singh Dhami
Follow Us on : Google News | Facebook | Twitter | YouTube