Welcome To Kannada News Today

ಕಾರ್ಮಿಕರಿಗೆ ಕವರ್ ಬದಲು ಪ್ಲಾಸ್ಟಿಕ್​ ಬಾಕ್ಸ್​ನಲ್ಲಿ ಊಟ ನೀಡುವಂತೆ ರಾಜ್ಯ ಸರ್ಕಾರ ಆದೇಶ

Karnataka govt orders NGOs to avoid distributing food in plastic bags

🌐 Kannada News :

ಕವರ್ ಬದಲು ಪ್ಲಾಸ್ಟಿಕ್​ ಬಾಕ್ಸ್​ನಲ್ಲಿ ಊಟ ನೀಡುವಂತೆ ರಾಜ್ಯ ಸರ್ಕಾರ ಆದೇಶ

ಪಾಲಿಥಿನ್ ಕವರ್ ಗಳ ಬದಲಾಗಿ ಪ್ಲಾಸ್ಟಿಕ್ ಬಾಕ್ಸ್ ಗಳಲ್ಲಿ ಆಹಾರ ಮತ್ತು ಊಟ ವಿತರಿಸಬೇಕು. ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಥಿನ್ ಕವರ್ ಗಳಲ್ಲಿ ಆಹಾರ ಪೂರೈಕೆ ಸರಿಯಲ್ಲ. ಬದಲಾಗಿ ಆಹಾರ ಅಥವಾ ಊಟವನ್ನು ಪ್ಲಾಸ್ಟಿಕ್ ಬಾಕ್ಸ್​ನಲ್ಲಿ ಊಟ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಹೌದು, ಲಾಕ್​ಡೌನ್​ನಿಂದಾಗಿ ಊಟಕ್ಕೂ ಪರದಾಡುತ್ತಿರುವ ಅನೇಕ ಬಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ, ಹಾಗೂ ಹಲವಾರು ಸಂಘ-ಸಂಸ್ಥೆಗಳು ಊಟ ವಿತರಿಸುತ್ತಿವೆ. ಅಂಥವರು ಪಾಲಿಥಿನ್ ಕವರ್​ಗಳ ಬದಲಾಗಿ ಪ್ಲಾಸ್ಟಿಕ್ ಬಾಕ್ಸ್​​ಗಳಲ್ಲಿ ಆಹಾರ ಮತ್ತು ಊಟವನ್ನು ವಿತರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಕೋವಿಡ್-19 ರ ಸಂಕಷ್ಟದ ಕಾಲದಲ್ಲಿ ಸರ್ಕಾರದ ಇಲಾಖೆಗಳು ಮತ್ತು ಸಂ‌ಸ್ಥೆಗಳು ಮಾತ್ರವಲ್ಲದೆ, ವಿವಿಧ ಸಂಸ್ಥೆಗಳು ಹಾಗೂ ಸಂಘಟನೆಗಳು ಕಾರ್ಮಿಕರಿಗೆ ಪಾಲಿಥಿನ್ ಕವರ್ ಗಳಲ್ಲಿ ಊಟ ಒದಗಿಸುತ್ತಿದೆ‌. ಆದರೆ, ಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪಾಲಿಥಿನ್ ಕವರ್​ಗಳ ಬದಲಾಗಿ ಆಹಾರ ಅಥವಾ ಊಟವನ್ನು ಪ್ಲಾಸ್ಟಿಕ್ ಬಾಕ್ಸ್​ಗಳಲ್ಲಿ ಸರಬರಾಜು ಮಾಡುವಂತೆ ಸರ್ಕಾರ ಆದೇಶದಲ್ಲಿ ತಿಳಿಸಿದೆ.

WebTitle : Karnataka govt orders NGOs to avoid distributing food in plastic bags

 

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile