Viral News, ಮೊಬೈಲ್ ಖರೀದಿಸಿದರೆ ನಿಂಬೆಹಣ್ಣು, ಲೀಟರ್ ಪೆಟ್ರೋಲ್ ಉಚಿತ
ಮೊಬೈಲ್ ಅಂಗಡಿ ಮಾಲೀಕರು ಗ್ರಾಹಕರನ್ನು ಸೆಳೆಯಲು ವಿನೂತನ ಉಪಾಯ ಮಾಡಿದ್ದಾರೆ. ತಮ್ಮ ಅಂಗಡಿಯಲ್ಲಿ ಮೊಬೈಲ್ ಫೋನ್ ಗಳನ್ನು ಖರೀದಿಸಿದರೆ ನಿಂಬೆಹಣ್ಣು, ಪೆಟ್ರೋಲ್ ಉಚಿತವಾಗಿ ನೀಡಲಾಗುತ್ತದೆ ಎಂಬ ಪೋಸ್ಟರ್ ಗಳನ್ನು ಹಾಕಿಕೊಂಡು ಗ್ರಾಹಕರನ್ನು ಸೆಳೆಯುತ್ತಿದ್ದಾರೆ.
ವಾರಣಾಸಿ: ಒಂದೆಡೆ ಪೆಟ್ರೋಲ್ ಬೆಲೆ ಏರುತ್ತಲೇ ಇದೆ. ಮತ್ತೊಂದೆಡೆ ನಿಂಬೆ ಹಣ್ಣಿನ ಬೆಲೆಯೂ ಗಗನಕ್ಕೇರಿದೆ. ಇವೆರಡೂ ಶ್ರೀಸಾಮಾನ್ಯನಿಗೆ ಹೊರೆಯ ಪರಿಸ್ಥಿತಿ ನಿರ್ಮಾಣ ಮಾಡಿದೆ.
ಈ ಸಮಯದಲ್ಲಿ ಮೊಬೈಲ್ ಅಂಗಡಿ ಮಾಲೀಕರು ಗ್ರಾಹಕರನ್ನು ಸೆಳೆಯಲು ವಿನೂತನ ಉಪಾಯ ಮಾಡಿದ್ದಾರೆ. ತಮ್ಮ ಅಂಗಡಿಯಲ್ಲಿ ಮೊಬೈಲ್ ಫೋನ್ ಗಳನ್ನು ಖರೀದಿಸಿದರೆ ನಿಂಬೆಹಣ್ಣು, ಪೆಟ್ರೋಲ್ ಉಚಿತವಾಗಿ ನೀಡಲಾಗುತ್ತದೆ ಎಂಬ ಪೋಸ್ಟರ್ ಗಳನ್ನು ಹಾಕಿಕೊಂಡು ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಇದು ಗುಜರಾತ್ನ ವಾರಣಾಸಿಯಲ್ಲಿ…. ವೈರಲ್ ಆಗಿದೆ.
ರೂ. 10 ಸಾವಿರ ಮೌಲ್ಯದ ಮೊಬೈಲ್ ಖರೀದಿಸಿದರೆ.. ಲೀಟರ್ ಪೆಟ್ರೋಲ್ ಉಚಿತವಾಗಿ ನೀಡಲಾಗುವುದು. ಮೊಬೈಲ್ ಪರಿಕರಗಳನ್ನು ಖರೀದಿಸಿದವರಿಗೆ 2 ರಿಂದ 4 ನಿಂಬೆಹಣ್ಣುಗಳನ್ನು ಉಚಿತವಾಗಿ ನೀಡುವುದಾಗಿ ಅಂಗಡಿ ಮಾಲೀಕರು ಸ್ಪಷ್ಟಪಡಿಸಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಪೆಟ್ರೋಲ್ ಮತ್ತು ನಿಂಬೆಹಣ್ಣಿನ ಬೆಲೆ ಗಗನಕ್ಕೇರಿರುವುದು ತಿಳಿದೇ ಇದೆ.
Liter Petrol And Lemon Being Offered Free With Mobile Accessories In Varanasi
Follow Us on : Google News | Facebook | Twitter | YouTube