Welcome To Kannada News Today

ಮೇ 17ರವರೆಗೆ ಲಾಕ್​ಡೌನ್ ವಿಸ್ತರಣೆ, ಕೇಂದ್ರ ಆದೇಶ : ಎರಡು ವಾರ ಲಾಕ್ ಡೌನ್ ವಿಸ್ತರಣೆ

Lockdown Extended by Two More Weeks, No Non-Essential Activity Between 7PM to 7 AM

🌐 Kannada News :

ಮೇ 17ರವರೆಗೆ ಲಾಕ್​ಡೌನ್ ವಿಸ್ತರಣೆ

ಸಂಜೆ 7 ರಿಂದ ಬೆಳಿಗ್ಗೆ 7 ರ ನಡುವೆ ಅನಿವಾರ್ಯವಲ್ಲದ ಅನಗತ್ಯ ಜನಸಂಚಾರ ನಿಷೇದ, ಲಾಕ್‌ಡೌನ್ ಅನ್ನು ಇನ್ನೂ ಎರಡು ವಾರಗಳ ಕಾಲ ವಿಸ್ತರಿಸಿದ ಕೇಂದ್ರ

ಕರೋನವೈರಸ್ ಮಹಾಮಾರಿ ಹರಡುವುದನ್ನು ತಡೆಗಟ್ಟಲು ಗೃಹ ಸಚಿವಾಲಯ (ಎಂಎಚ್‌ಎ) ಶುಕ್ರವಾರ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಸ್ತರಿಸಿದೆ. ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಂತೆ ಮೇ 4 ರಂದು ಕೊನೆಗೊಳ್ಳಲಿರುವ ಲಾಕ್‌ಡೌನ್‌ ಮತ್ತೊಮ್ಮೆ ವಿಸ್ತರಣೆಗೊಂಡಿದೆ.

ಆದರೆ, ದೇಶಾದ್ಯಂತದ ವಿವಿಧ ಜಿಲ್ಲೆಗಳ ಅಪಾಯ-ವಿವರಗಳನ್ನು ಪರಿಗಣಿಸಿದ ನಂತರ ಲಾಕ್‌ಡೌನ್‌ಗೆ ವಿನಾಯಿತಿ ನೀಡಲಾಗಿದೆ. ಈ ಅವಧಿಯಲ್ಲಿ ವಿವಿಧ ಆರ್ಥಿಕ ಚಟುವಟಿಕೆಗಳನ್ನು ನಿಯಂತ್ರಿಸಲು ಎಂಎಚ್‌ಎ ನಿರ್ದಿಷ್ಟ ಮಾರ್ಗಸೂಚಿಗಳನ್ನು ಸಹ ನೀಡಿದೆ.

ಹೌದು, ಮೇ 3ರಿಂದ ಮತ್ತೆ ಎರಡು ವಾರ ಕಾಲ ಲಾಕ್ ಡೌನ್ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮೇ 17ರವರೆಗೂ ಲಾಕ್ ಡೌನ್ ಮುಂದುವರಿಯಲಿದೆ. ಇನ್ನೇನು ಲಾಕ್ ಡೌನ್ ಮುಗಿದೇ ಹೋಗಬಹುದು, ಇಲ್ಲಾ ಕೆಲ ವಿನಾಯತಿ ಸಿಗಬಹುದು, ಇಲ್ಲಾ ಆಗಾಗಬಹುದು ಇಗಾಗಬಹುದು ಎಂಬ ನಾನಾ ಗೊಂದಲಕ್ಕೆ ತೆರೆ ಬಿದ್ದಿದೆ.

ಈ ಮೂರನೇ ಹಂತದ ಲಾಕ್ ಡೌನ್ ಅವಧಿಯಲ್ಲಿ ನಿಯಮಾವಳಿಗಳು ಈ ಮೊದಲಿಗಿಂತ ಸ್ವಲ್ಪ ಭಿನ್ನವಾಗಿರಲಿವೆ. ಈ ನಿಯಮಾವಳಿಗಳ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಮಾರ್ಗಸೂಚಿ ನೀಡಿದೆ.

ಹಸಿರು ವಲಯದ ಪಟ್ಟಿಯಲ್ಲಿರುವ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಬಹುತೇಕ ಸಡಿಲಿಸಲಾಗಿದೆ. ಆರೆಂಜ್ ಜೋನ್​ನ ಪಟ್ಟಿಯಲ್ಲಿರುವ ಪ್ರದೇಶಗಳಿಗೂ ವಿನಾಯಿತಿಗಳನ್ನು ಕಲ್ಪಿಸಲಾಗಿದೆ. ಆದರೆ ರೆಡ್ ಜೋನ್​ನಲ್ಲಿರುವ ಪ್ರದೇಶಗಳಲ್ಲಿ ಕಠಿಣ ನಿಯಮಗಳು ಮುಂದುವರಿಯಲಿವೆ. ಕಟ್ಟುನಿಟ್ಟಿನಕ್ರಮಗಳು ಕೈಗೊಳ್ಳಲಾಗುತ್ತದೆ.

ಮೇ 17ರವರೆಗೆ ಲಾಕ್​ಡೌನ್ ವಿಸ್ತರಣೆ, ಗಮನಾರ್ಹ ಸುಧಾರಣೆಗಾಗಿ

ಸಮಗ್ರ ಪರಿಶೀಲನೆಯ ನಂತರ “, ಮತ್ತು ವೀಕ್ಷಣೆಯಲ್ಲಿ ಲಾಕ್ಡೌನ್ ಕ್ರಮಗಳು ದೇಶದ COVID-19 ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆಗಳಿಗೆ ಕಾರಣವಾಗಿದೆ, ಗೃಹ ವ್ಯವಹಾರಗಳ ಸಚಿವಾಲಯ ( MHA ), ಭಾರತ ಸರ್ಕಾರ (GoI) ಇಂದು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಅಡಿಯಲ್ಲಿ ಆದೇಶವನ್ನು ಹೊರಡಿಸಿದೆ. 2020 ರ ಮೇ 4 ರ ನಂತರ ಇನ್ನೂ ಎರಡು ವಾರಗಳವರೆಗೆ ಲಾಕ್‌ಡೌನ್ ಮಾಡಲಾಗಿದೆ “ಎಂದು ಗೃಹ ಸಚಿವಾಲಯದ ಅಧಿಸೂಚನೆ ತಿಳಿಸಿದೆ.

ಮೇ 17ರವರೆಗೆ ಲಾಕ್​ಡೌನ್ ವಿಸ್ತರಣೆ, ವಲಯಗಳಾಗಿ ವಿಂಗಡಣೆ

ಲಾಕ್ ಡೌನ್ ವಿಸ್ತರಣೆಯು ಕೆಲವು ವಿನಾಯತಿಗಳನ್ನು ನೀಡುತ್ತದೆ, ಇದು ಜಿಲ್ಲೆಗಳಲ್ಲಿ ವೈರಸ್ ಹರಡುವಿಕೆಯ ಆಧಾರದ ಮೇಲೆ ನಿಯಂತ್ರಿಸಲ್ಪಡುತ್ತದೆ, ಇದನ್ನು ಕೆಂಪು (ಹಾಟ್ಸ್ಪಾಟ್), ಹಸಿರು ಮತ್ತು ಆರಂಜ್ ವಲಯಗಳು ಎಂದು ಗುರುತಿಸಲಾಗುತ್ತದೆ.

ಮೇ 17ರವರೆಗೆ ಲಾಕ್​ಡೌನ್ ವಿಸ್ತರಣೆ, ಯಾವುದಕ್ಕೆ ನಿರ್ಬಂಧ

ಸಧ್ಯ ನಾವು ಲಾಕ್ ಡೌನ್ 3.O ಗೆ ಬಂದು ನಿಂತಿದ್ದೇವೆ, ಈ ವೇಳೆ ಹಲವು ನಿರ್ಬಂಧಗಳು ಹಿಂದಿನಂತೆ ಮುಂದುವರಿಯಲಿವೆ, ಯಾವುದಕ್ಕೆಲ್ಲ ನಿರ್ಬಂಧ, ಯಾವುದಕ್ಕೆ ಅನುಮತಿಯಿಲ್ಲ ನೋಡಿ… ವಿಮಾನ, ರೈಲು, ಮೆಟ್ರೋ, ಅಂತಾರಾಜ್ಯ ರಸ್ತೆ ಇತ್ಯಾದಿ ಸಂಚಾರ ಸ್ಥಗಿತ ಈ ಹಿಂದಿನಂತೆ ಮುಂದುವರಿಯಲಿದೆ.

ಇನ್ನು ಶಾಲೆ ಕಾಲೇಜುಗಳು ಮುಂತಾದ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುವುದಿಲ್ಲ. ಸಿನಿಮಾ ಹಾಲ್, ಮನೋರ್ನಜನೆ ತಾಣಗಳು, ಮಾಲ್​ಗಳು, ಹೊಟೆಲ್, ಪಬ್, ರೆಸ್ಟೋರೆಂಟ್​ಗಳ ಸ್ಥಗಿತವಾಗಿರುತ್ತವೆ.

ಜನರು ಗುಂಪು ಗೂಡುವುದು , ತೇರು, ಜಾತ್ರೆ ಬೇರೆ ಧಾರ್ಮಿಕ ಕಾರ್ಯಕ್ರಗಳು ನಿರ್ಬಂಧ. ಮಂದಿರಗಳಿಗೂ ಯಾವುದೇ ಅವಕಾಶ ಇಲ್ಲ. ಇವೆಲ್ಲ ನಿರ್ಬಂಧಗಳು ಮೇ 17ರವರೆಗೂ ಮುಂದುವರಿಯುತ್ತವೆ.

ಹಾಗೂ ಮುಖ್ಯವಾಗಿ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಅನವಶ್ಯಕ ಜನಸಂಚಾರವನ್ನು ನಿಷೇಧಿಸಲಾಗಿದೆ. ಸ್ಥಳೀಯ ಆಡಳಿತಗಳು ಸಿಆರ್​​ಪಿಸಿ ಸೆಕ್ಷನ್ 144 ಬಳಸಿ ನಿಷೇಧಾಜ್ಞೆ ಜಾರಿಗೊಳಿಸಲಿ. 65 ವರ್ಷಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇವರುಗಳು ಮನೆಯಿಂದ ಹೊರಗೆ ಬರದಂತೆ ಎಚ್ಚರ ವಹಿಸಿ ಎಂದು ಆದೇಶಪತ್ರದಲ್ಲಿ ತಿಳಿಸಲಾಗಿದೆ.

WebTitle : Lockdown Extended by Two More Weeks, No Non-Essential Activity Between 7PM to 7 AM

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.