Welcome To Kannada News Today

ಕೃಷಿಕರಿಗೆ ಕಂಟಕವಾದ ಲಾಕ್‌ಡೌನ್, ಪಪ್ಪಾಯಿಯನ್ನೂ ಅಪ್ಪಿ ಕೆಡವಿದ ಕೊರೋನಾ!

Lockdown, which has become a big problem for farmers

🌐 Kannada News :

ನರೇಗಲ್ಲ: ದೇಶದಲ್ಲಿ ಹರಡಿರುವ ಕೊರೋನಾ ವೈರಸ್ ರೈತರನ್ನು ಬಿಡುತ್ತಿಲ್ಲ. ಪಪ್ಪಾಯಿ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತವಾದ ಬೆಲೆ ಸಿಗದೆ ಸಮೀಪದ ಅಬ್ಬಿಗೇರಿ ಗ್ರಾಮದ ರೈತ ಬಸವರಾಜ ಹನಮಪ್ಪ ತಳವಾರ ಹೆಚ್ಚಿನ ಬಂಡವಾಳ ಹಾಕಿ ಬೆಳೆದಿರುವ ಗಿಡಗಳನ್ನು ಕಡಿದು ಹಾಕುತ್ತಿದ್ದಾರೆ.

ಕೊರೋನಾ ಕಾರಣದಿಂದ ಲಾಕ್ ಡೌನ್ ಘೋಷಣೆಯಾಯಿತು. ಲಾಕ್‌ ಡೌನ್ ಘೋಷಣೆಯಿಂದ ಕೃಷಿ ಉತ್ಪನ್ನಗಳ ಸಾಗಾಣಿಕೆ ಕಷ್ಟವಾಯಿತು. ಇತ್ತ ಮಾರುಕಟ್ಟಯೂ ಬಂದಾಯಿತು.

ದಿಕ್ಕು ತೋಚದ ಪಪ್ಪಾಯಿ ಬೆಳೆಗಾರ ಫಸಲಿಗೆ ಬಂದಿರುವ ಪಪ್ಪಾಯಿ (ಪರಂಗಿ) ಗಿಡಗಳಿಗೆ ಕೊಡಲಿ ಹಾಕುತ್ತಿದ್ದಾರೆ. ಎಳೆ ಗಿಡಗಳನ್ನು ಕೂಡ ರೈತರು ಬಿಡುತ್ತಿಲ್ಲ. ಪ್ರಾರಂಭದಲ್ಲಿ ಬೆರಳೆಣಿಕೆಯಷ್ಟು ಪಪ್ಪಾಯಿ ಬೆಳೆದು ಒಳ್ಳೆಯ ಲಾಭವನ್ನು ಪಡೆದುಕೊಂಡಿದ್ದರು. ಆದರೆ, ಬೆಳೆಗೆ ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಬೆಲೆ ಸಿಗದೇ ರೈತರು ತೊಂದರೆ ಅನುಭವಿಸಿದರು.
ಬಸವರಾಜ ತಳವಾರ ಈಗ ೩ ಎಕರೆ ೨೧ ಗುಂಟೆ ಜಮೀನಿನಲ್ಲಿ ಬೆಳೆಯಲಾಗಿದ್ದ ಪಪ್ಪಾಯಿ ಕಾಯಿಗಳ ಜತೆಗೆ ಗಿಡಗಳನ್ನು ಕೊಡಲಿಯಿಂದ ಸಂಪೂರ್ಣ ಅಳಿಸಿ ಹಾಕಿದ್ದಾರೆ.

ತರಕಾರಿ, ಹಣ್ಣುಗಳ ಮಾರುಕಟ್ಟೆಗಳು ಈಗಾಗಲೇ ಸ್ಥಗಿತಗೊಂಡಿರುವುದರಿಂದ ಪಪ್ಪಾಯಿಗಳನ್ನು ಜನರು ಸೂಕ್ತ ಬೆಲೆಗೆ ಕೇಳುತ್ತಿಲ್ಲ. ಹಣ್ಣು ಖರೀದಾರರು ಪಪ್ಪಾಯಿಗಳನ್ನು ತೆಗೆದುಕೊಳ್ಳುತ್ತಿಲ್ಲ. ಗಿಡದಲ್ಲಯೇ ಹಣ್ಣುಗಳು ಕೊಳೆಯುವುದಕ್ಕೆ ಪ್ರಾರಂಭಿಸಿದ್ದವು. ಇದನ್ನು ಇಟ್ಟುಕೊಂಡರೂ ಏನೂ ಪ್ರಯೋಜನವಿಲ್ಲ ಎಂದು ತಿಳಿದ ರೈತ ಕೊಡಲಿಯಿಂದ ಗಿಡಗಳನ್ನು ಕತ್ತರಿಸುತ್ತಿದ್ದಾರೆ. ನಂತರ ಟ್ರಾಕ್ಟರ್ ನಿಂದ ರೋಟರ್ ಹೊಡೆದು ಬೆಳೆ ನಾಶ ಮಾಡಿದ್ದಾರೆ.

Web Title :

Get Latest Kannada News an up-to-date news coverage

ಕ್ಷಣ ಕ್ಷಣದ ಕನ್ನಡ ಸುದ್ದಿಗಳಿಗಾಗಿ FacebookTwitterYouTube ಅನುಸರಿಸಿ.