ಲೋಕಸಭಾ ಸ್ಪೀಕರ್ ಪತ್ರಿಕಾಗೋಷ್ಠಿ ರದ್ದು

Lok Sabha Speaker cancels press conference । National News

ಲೋಕಸಭಾ ಸ್ಪೀಕರ್ ಪತ್ರಿಕಾಗೋಷ್ಠಿ ರದ್ದು – Lok Sabha Speaker cancels press conference

ಲೋಕಸಭಾ ಸ್ಪೀಕರ್ ಪತ್ರಿಕಾಗೋಷ್ಠಿ ರದ್ದು

ಕನ್ನಡ ನ್ಯೂಸ್ ಟುಡೇ – ನವದೆಹಲಿ : ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪತ್ರಿಕಾಗೋಷ್ಠಿ ರದ್ದುಗೊಂಡಿದೆ, ಸ್ಪೀಕರ್ ಬುಧವಾರ ಪತ್ರಿಕಾಗೋಷ್ಠಿ ನಡೆಸಲು ಉದ್ದೇಶಿಸಿದ್ದರು, ಬಿಜೆಪಿ ನಾಯಕಿ, ಕೇಂದ್ರ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಹಠಾತ್ ಮರಣದಿಂದಾಗಿ ಈ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.
ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಹೃದಯಾಘಾತದಿಂದಾಗಿ ಸುಷ್ಮಾ ಸ್ವರಾಜ್ ಅವರನ್ನು ಏಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯರ ತಂಡವು ಆಕೆಗೆ ಸುಮಾರು 70 ರಿಂದ 80 ನಿಮಿಷಗಳ ಕಾಲ ಚಿಕಿತ್ಸೆ ನೀಡಿತಾದರೂ, ಚಿಕಿತ್ಸೆ ಫಲಕಾರಿಯಾಗಿದೆ ರಾತ್ರಿ ಸುಷ್ಮಾ ಸ್ವರಾಜ್ ನಿಧನರಾದರು. 2014 ರಲ್ಲಿ ಮೋದಿಯವರ ಮೊದಲ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿದ್ದ ಸುಷ್ಮಾ ಸ್ವರಾಜ್ ಅವರು ಅನಾರೋಗ್ಯದ ಕಾರಣ 2019 ರ ಲೋಕಸಭಾ ಚುನಾವಣೆಗೆಯಿಂದ ಹೊರಗುಳಿದಿದ್ದರು. ಆದರೆ ಟ್ವಿಟರ್ ನಲ್ಲಿ ಸಕ್ರಿಯರಾಗಿದ್ದ ಅವರು ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸುತ್ತಿದ್ದರು.
Web Title : Lok Sabha Speaker cancels press conference
Stay updated with Kannada News top headlines of National News