Kannada News - Kannadigas Adda

Welcome To Kannada News - Kannadigas Adda

ಒಂದೇ ಸ್ಟೂಲ್ ಮೇಲೆ ನಿಂತು ಪ್ರೇಮಿಗಳ ಆತ್ಮಹತ್ಯೆ

lovers commits suicide in a single stool

Kannadanews.today - ಕನ್ನಡಿಗಾಸ್ ಅಡ್ಡ

ಒಂದೇ ಸ್ಟೂಲ್ ಮೇಲೆ ನಿಂತು ಪ್ರೇಮಿಗಳ ಆತ್ಮಹತ್ಯೆ

lovers commits suicide in a single stool

ರಾಷ್ಟ್ರೀಯ – ಭೋಪಾಲ್ : ಮಧ್ಯ ಪ್ರದೇಶದಲ್ಲಿ ಪ್ರೇಮಿಗಳಿಬ್ಬರು ನೇಣಿಗೆ ಶರಣಾಗಿದ್ದಾರೆ. ಈ ಇಬ್ಬರು ಒಂದೇ ಕುರ್ಚಿ ಮೇಲೆ ನಿಂತು ಮೃತ್ಯುವನ್ನು ಆಹ್ವಾನಿಸಿದ್ದಾರೆ. ಮಾಹಿತಿ ಪ್ರಾಕಾರ ಭೋಪಾಲ್ ನ ಒಂದು ಗ್ರಾಮದ ಅರ್ಜುನ್ ಸಿಂಗ್ ನೊಂದಿಗೆ ಶಿಲ್ಪಿ ಇದ್ದಕ್ಕಿದಂತೆ ಕಾಣೆಯಾಗಿದ್ದರು.

ಎಸ್.ಐ ಭರತ್ ಸಿಂಗ್ ನೀಡಿದ ಮಾಹಿತಿಯಂತೆ , ಶಿಲ್ಪಿ ಪೋಷಕರು ಕಣೆಯ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಅಂತೆಯೇ ಪೊಲೀಸರು ಇವರ ಹುಡುಕಾಟ ನಡೆಸಿದ್ದರು.

ಈ ನಡುವೆ ಶಿಲ್ಪಿ ಅವಳ ಪ್ರೇಮಿ ಅರ್ಜುನ್ ಸಿಂಗ್ ಜೊತೆ ಸೇರಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಒಂದೇ ಸ್ಟೂಲ್ ಮೇಲೆ ನಿಂತು ಇಬ್ಬರು ಪ್ರತ್ಯೇಕವಾಗಿ ನೇಣಿಗೆ ಶರಣಾಗಿದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಯಾವುದೇ ಕಾರಣ ತಿಳಿದು ಬಂದಿಲ್ಲ , ಅಂತೆಯೇ ಯಾವುದೇ ಡೆತ್ ನೋಟ್ ಕೂಡ ಇರಲಿಲ್ಲ.

ಪ್ರಕರಣ ದಾಖಲಿಸಿರುವ ಪೊಲೀಸರು , ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ , ಆತ್ಮಹತ್ಯೆಯ ಕಾರಣಕ್ಕಾಗಿ ತನಿಖೆ ನಡೆಸಿದ್ದಾರೆ.

ಮೃತರಿಬ್ಬರು , ಬೇರೆ ಬೇರೆ ಮಠಕ್ಕೆ ಸೇರಿದವರಾಗಿದ್ದು , ಮೃತ ಅರ್ಜುನ್ ಸಿಂಗ್ ಸಂಬಂದಿಕರು ನೀಡಿದ ಮಾಹಿತಿಯಂತೆ , ಅಜ್ಜಿಯ ಜೊತೆ ನೆಲೆಸಿದ್ದನು. ಆದರೆ ಆತ್ಮಹತ್ಯೆಯ ದಿನ ಅಜ್ಜಿ ಮನೆಯಲ್ಲಿ ಇರಲಿಲ್ಲ. ಈ ಸಮಯದಲ್ಲಿ ಈ ಘಟನೆ ನಡೆದಿದೆ.

ಆತ್ಮಹತ್ಯೆಯ ಆ ದಿನ ಅರ್ಜುನ್ ಸಿಂಗ್ ಕೆಲಸಕ್ಕೆ ಹೋಗಿರಲಿಲ್ಲ , ಕೆಲಸಕ್ಕೆ ಬಾರದ ಅರ್ಜುನ್ ಸಿಂಗ್ ನನ್ನ ನೋಡಲು ಅವನ ಸ್ನೇಹಿತ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತ ದೇಹಗಳನ್ನು ಕಂಡ ಆತ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ////

WebTitle : ಒಂದೇ ಸ್ಟೂಲ್ ಮೇಲೆ ನಿಂತು ಪ್ರೇಮಿಗಳ ಆತ್ಮಹತ್ಯೆ- lovers commits suicide in a single stool

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್ : National News LatestNational News KannadaKannada Crime NewsKarnataka Crime News 

Quick Links : Film News | Politics News | Crime News | Health Tips | India News | World News | Tech News | Jokes | Food & Recipes | ದಿನಭವಿಷ್ಯ

ನಮ್ಮ Kannada News ತಾಣ ಇಷ್ಟವಾಗಿದ್ದರೆ, YouTube - Live News Channel ಗೆ ಚಂದಾದಾರರಾಗಿ. ತ್ವರಿತ ಕನ್ನಡ ನ್ಯೂಸ್ ಗಾಗಿ ನಮ್ಮನ್ನು News Videos ಸಮೇತ Twitter, Instagram ಮತ್ತು Facebook ನಲ್ಲಿ ಸಹ ಕಾಣಬಹುದು.