ಅಜಿತ್ ಪವಾರ್ ಸಂಬಂಧಿಕರ 1,400 ಕೋಟಿ ಆಸ್ತಿ ಮುಟ್ಟುಗೋಲು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Maharashtra Deputy Chief Minister Ajit Pawar) ಅವರ ಸಂಬಂಧಿಕರಿಗೆ ಸೇರಿದ ಸುಮಾರು 1,400 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ (ಐಟಿ) (The Income Tax (IT) department) ಇಲಾಖೆ ಜಪ್ತಿ ಮಾಡಿದೆ.

ಮುಂಬೈ : ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Maharashtra Deputy Chief Minister Ajit Pawar) ಅವರ ಸಂಬಂಧಿಕರಿಗೆ ಸೇರಿದ ಸುಮಾರು 1,400 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ (ಐಟಿ) (The Income Tax (IT) department) ಇಲಾಖೆ ಜಪ್ತಿ ಮಾಡಿದೆ.

ಈ ಪಟ್ಟಿಯಲ್ಲಿ ಮುಂಬೈ, ದೆಹಲಿ, ಪುಣೆ ಮತ್ತು ಗೋವಾದಲ್ಲಿನ ಆಸ್ತಿಗಳು ಹಾಗೂ ಮಹಾರಾಷ್ಟ್ರದ ಸುಮಾರು 25 ಪ್ರದೇಶಗಳಲ್ಲಿನ ಜಮೀನುಗಳು ಸೇರಿವೆ. ಇವುಗಳಲ್ಲಿ ಪ್ರಮುಖವಾದುದೆಂದರೆ ಸತಾರಾದಲ್ಲಿನ ಸಕ್ಕರೆ ಕಾರ್ಖಾನೆ (ರೂ. 600 ಕೋಟಿ) ಮತ್ತು ಗೋವಾದ ರೆಸಾರ್ಟ್ (ರೂ. 250 ಕೋಟಿ).

ಕಳೆದ ತಿಂಗಳು ಅಜಿತ್ ಪವಾರ್ ಅವರ ಸಂಬಂಧಿಕರ ಆಸ್ತಿಗಳ ಮೇಲೆ ಶೋಧ ನಡೆಸಿದ್ದ ಐಟಿ ಅಧಿಕಾರಿಗಳು ಮಂಗಳವಾರ ಬಿನಾಮಿ ಆಸ್ತಿ ಕಾಯ್ದೆಯಡಿ ಜಪ್ತಿ ಆದೇಶ ಹೊರಡಿಸಿದ್ದಾರೆ. ಏತನ್ಮಧ್ಯೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಮುಂಬೈ ನ್ಯಾಯಾಲಯ ಮಂಗಳವಾರ ರಿಮಾಂಡ್ ಮಾಡಿದೆ.

Stay updated with us for all News in Kannada at Facebook | Twitter
Scroll Down To More News Today