ಶೂಟಿಂಗ್‌ ವೇಳೆ ಮಲಯಾಳಂ ನಟ ಟೋವಿನೋ ಥಾಮಸ್ ಗೆ ಗಂಭೀರ ಗಾಯ, ಐಸಿಯುನಲ್ಲಿ ಚಿಕಿತ್ಸೆ

Malayalam actor Tovino Thomas injured : ಚಿತ್ರದ ಶೂಟಿಂಗ್ ಸಮಯದಲ್ಲಿ ಮಲಯಾಳಂ ನಟ ಟೋವಿನೋ ಥಾಮಸ್ ಗಾಯಗೊಂಡಿದ್ದಾರೆ

ಚಿತ್ರೀಕರಣದ ಸಮಯದಲ್ಲಿ ಜನಪ್ರಿಯ ಮಲಯಾಳಂ ನಟ ಟೋವಿನೋ ಥಾಮಸ್ ಗಾಯಗೊಂಡಿದ್ದಾರೆ ಎಂದು ಚಿತ್ರೋದ್ಯಮದ ಮೂಲಗಳು ಬುಧವಾರ ತಿಳಿಸಿವೆ.
ಹೋಡೆದಾಟದ ಸನ್ನಿವೇಶದ ಚಿತ್ರೀಕರಣದ ವೇಳೆ ನಟನ ಹೊಟ್ಟೆ ಗಾಯಗೊಂಡಿದ್ದು, ಹೊಟ್ಟೆ ನೋವಿನ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರನ್ನು ಆಸ್ಪತ್ರೆಯ ಐಸಿಯುನಲ್ಲಿ 24 ಗಂಟೆಗಳ ವೀಕ್ಷಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

( Kannada News ) ಶೂಟಿಂಗ್‌ನಲ್ಲಿ ಮಲಯಾಳಂ ನಟ ಟೋವಿನೋ ಥಾಮಸ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರು ‘ಕಲಾ’ ಎಂಬ ಆಕ್ಷನ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದರು. ಬೃಹತ್ ಆಕ್ಷನ್ ದೃಶ್ಯವನ್ನು ಚಿತ್ರೀಕರಿಸುವಾಗ, ಅವರ ಹೊಟ್ಟೆ ಭಾಗಕ್ಕೆ ಗಂಭೀರ ಪೆಟ್ಟಾಗಿದೆ.

ಚಿತ್ರೀಕರಣದ ಸಮಯದಲ್ಲಿ ಜನಪ್ರಿಯ ಮಲಯಾಳಂ ನಟ ಟೋವಿನೋ ಥಾಮಸ್ ಗಾಯಗೊಂಡಿದ್ದಾರೆ ಎಂದು ಚಿತ್ರೋದ್ಯಮದ ಮೂಲಗಳು ಬುಧವಾರ ತಿಳಿಸಿವೆ.

ಹೋಡೆದಾಟದ ಸನ್ನಿವೇಶದ ಚಿತ್ರೀಕರಣದ ವೇಳೆ ನಟನ ಹೊಟ್ಟೆ ಗಾಯಗೊಂಡಿದ್ದು, ಹೊಟ್ಟೆ ನೋವಿನ ನಂತರ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರನ್ನು ಆಸ್ಪತ್ರೆಯ ಐಸಿಯುನಲ್ಲಿ 24 ಗಂಟೆಗಳ ವೀಕ್ಷಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಕೆಜಿಎಫ್ 2 : ಚಿತ್ರದ ಶೂಟಿಂಗ್ ಪುನರಾರಂಭ, ರಾಕಿಂಗ್ ಸ್ಟಾರ್ ಯಶ್ ಮತ್ತೆ ಸೆಟ್ ನಲ್ಲಿ

ಅಪಘಾತ ಸಂಭವಿಸಿದ ತಕ್ಷಣ, ಟೋವಿನೋ ಥಾಮಸ್ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯವು ಗಂಭೀರ ಎಂದು ತಿಳಿದ ಮೇಲೆ, ವೈದ್ಯರು ಟೋವಿನೋ ಥಾಮಸ್ ಅವರನ್ನು ಚಿಕಿತ್ಸೆಗಾಗಿ ಐಸಿಯುಗೆ ಸ್ಥಳಾಂತರಿಸಿದ್ದಾರೆ.

ಥಾಮಸ್ ಅವರ ಕುಟುಂಬ ಸದಸ್ಯರು ಅವರ ಆರೋಗ್ಯದ ಬಗ್ಗೆ ವದಂತಿಗಳನ್ನು ನಂಬಬೇಡಿ ಮತ್ತು ಸ್ವತಃ ಅಧಿಕೃತ ಹೇಳಿಕೆಯನ್ನು ನಾವೇ ನೀಡುತ್ತೇವೆ ಎಂದು ಹೇಳಿದ್ದಾರೆ

Web Title : Malayalam actor Tovino Thomas injured during film-shoot
Scroll Down To More News Today