ಪತ್ನಿಯ ಕೊನೆಯ ಆಸೆ.. ದೇವರಿಗೆ 17 ಲಕ್ಷ ಬೆಲೆ ಬಾಳುವ ಚಿನ್ನ ದಾನ

ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೊನೆಯ ಆಸೆಗೆ 17 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದಾನ ಮಾಡಿದ್ದಾರೆ.

ಉಜ್ಜಯಿನಿ : ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಕೊನೆಯ ಆಸೆಗೆ 17 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ದಾನ ಮಾಡಿದ್ದಾರೆ.

ರಶ್ಮಿ ಪ್ರಭಾ ಮಹಾಕಾಳೇಶ್ವರನ ಭಕ್ತರು, ಆಗಾಗ ಪತಿಯೊಂದಿಗೆ ದೇವಸ್ಥಾನ ಭೇಟಿ ನೀಡುತ್ತಿದ್ದರು. ತನ್ನೆಲ್ಲ ಚಿನ್ನವನ್ನು ಅರ್ಪಿಸಲು ಪತಿಯೊಂದಿಗೆ ಹೇಳಿಕೊಂಡಿದ್ದರು. ಆಕೆ ಇತ್ತೀಚೆಗೆ ತೀರಿಕೊಂಡಳು.

ಪತ್ನಿಯನ್ನು ಕಳೆದುಕೊಂಡ ಜಾರ್ಖಂಡ್‌ನ ಬೊಕಾರೋ ಮೂಲದ ಆಕೆಯ ಪತಿ ಸಂಜೀವ್ ಕುಮಾರ್ ಅವರು ಪತ್ನಿಯ ಕೊನೆಯ ಇಚ್ಛೆಯಂತೆ 310 ಗ್ರಾಂ ಚಿನ್ನಾಭರಣಗಳಾದ ನೆಕ್ಲೇಸ್, ಕಿವಿಯೋಲೆ ಮುಂತಾದ ತನ್ನ ಪತ್ನಿಯ ಎಲ್ಲಾ ಚಿನ್ನಾಭರಣಗಳನ್ನು ಶನಿವಾರ ದೇವಸ್ಥಾನಕ್ಕೆ ಅರ್ಪಿಸಿದ್ದಾರೆ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ಮಂಗಳವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪತ್ನಿಯ ಕೊನೆಯ ಆಸೆ ಈಡೇರಿಸಿದ ತೃಪ್ತಿಯಿಂದ ಪತಿ ಆಕೆಯ ಕೊನೆಯ ಆಸೆ ನೆರವೇರಿಸಿದ್ದಾನೆ, ಎಷ್ಟೋ ಜನ ದುಡ್ಡು, ಒಡವೆ ಅಂದರೆ ಯಾವುದೇ ಮೋಸಕ್ಕೆ ಮೋಹಕ್ಕೆ ಒಳಾಗುಗುವ ಈ ಕಾಲದಲ್ಲಿ ತನ್ನ ಪತ್ನಿಯ ಕೊನೆ ಆಸೆ ಈಡೇರಿಸಿದ ಈ ಪತಿಗೆ ಹಾಟ್ಸ್ ಅಪ್…

Stay updated with us for all News in Kannada at Facebook | Twitter
Scroll Down To More News Today