ಆಸೆ ತೀರಿಸಲಿಲ್ಲವೆಂದು, ಮಹಿಳೆಯ ಸಜೀವ ಧಹನ ಮಾಡಲೆತ್ನಿಸಿದ ಕಾಮುಕ

Man tried to burn alive Married woman, while She Not Accept illegal relationship

🌐 Kannada News :

ಕನ್ನಡ ನ್ಯೂಸ್ ಟುಡೇ, ಚನ್ನೈ :

ತನ್ನ ಕಾಮ ತೃಷೆ ತೀರಿಸಲಿಲ್ಲ ವೆಂದು ವಿವಾಹಿತ ಮಹಿಳೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಇಟ್ಟ ಭೀಕರ ಘಟನೆ ನಡೆದಿದೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಸೇಲಂನ ವೇಲುಪುರಂ ಜಿಲ್ಲೆಯ ಬಳಿಯ ಕಟುಕ್ಕೊಟ್ಟೈ ಪ್ರದೇಶದ ಬಕ್ಕಂಪಾಡಿ ಮೂಲದ ಚಿನ್ನದೊರೈ (32) 8 ವರ್ಷಗಳ ಹಿಂದೆ ಕಡಲೂರು ಜಿಲ್ಲೆಯ ವೇಪುರ ಬಳಿಯ ಅಗರಂ ಗ್ರಾಮದ ಅರುಣದೇವಿ (28) ಅವರನ್ನು ವಿವಾಹವಾದರು.

ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಚಿನ್ನದೊರೈ ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅರುಣಾ ದೇವಿ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಅಕ್ಕಂಪಡಿಯಲ್ಲಿಯೇ ವಾಸಿಸುತ್ತಿದ್ದಾರೆ.

ಒಂದು ವರ್ಷದ ಹಿಂದೆ ಅರುಣಾದೇವಿಯ ದೊಡ್ಡಮನ ಮಗ ಪ್ರಶಾಂತ್ (29) ಅರುಣಾ ದೇವಿಯ ಮನೆಗೆ ಬಂದಿದ್ದನು. ಅವನ ಜೊತೆ ಸ್ನೇಹಿತ ಏಳುಮಲೈ (21) ಅನ್ನು ಕರೆದು ಕೊಂಡು ಬಂದಿದ್ದನು. ಅರುಣಾದೇವಿಯನ್ನು ನೋಡಿದ, ಏಳುಮಲೈಗೆ ಅವಳ ಸೌಂದರ್ಯ ಕಣ್ಣು ಕುಕ್ಕಿತ್ತು, ಹೇಗಾದರೂ ಮಾಡಿ ಈಕೆಯನ್ನು ಅನುಭವಿಸಲೇ ಬೇಕು ಎಂಬ ನಿರ್ಧಾರ ಮಾಡಿದ ಮನೆಹಾಳ ಏಳುಮಲೈ. ಅವಳ ಫೋನ್ ಸಂಖ್ಯೆ ಪತ್ತೆ ಹಚ್ಚಿದ್ದ, ಪದೇ ಪದೇ ಆಕೆಯ ಮನಹೋಲಿಕೆಗೆ ಯತ್ನಿಸಿದ್ದ.

ಹೇಗೂ ಆಕೆ ಮನೆಯಲ್ಲಿ ಒಂಟಿಯಾಗಿ ಇರುತ್ತಾಳೆ ಎಂದು ತಿಳಿದಿದ್ದ ಏಳುಮಲೈ, ಈ ನಿಟ್ಟಿನಲ್ಲಿ ಇದೆ ಶನಿವಾರ ನೇರವಾಗಿ ಮತ್ತೊಮ್ಮೆ ಆಕೆಯ ಮನೆಗೆ ಬಂದಿದ್ದಾನೆ. ಆಕೆಯನ್ನು ತನ್ನ ಆಸೆ ಈಡೇರಿಸುವಂತೆ ಒತ್ತಾಯಿಸಿದ್ದಾನೆ. ಬಲವಂತಪಡಿಸಿದ್ದಾನೆ.

ಏಳುಮಲೈ ಗೆ ಎಚ್ಚರಿಕೆ ನೀಡಿದ ಆಕೆ, ಮನೆಯಿಂದ ಹೋರಾಡುವಂತೆ ಕಿರುಚಾಡಿದ್ದಾಳೆ. ಕೋಪಗೊಂಡ ಕಾಮಪಿಶಾಚಿ ಏಳುಮಲೈ, ಮನೆಯಲ್ಲಿಯೇ ಇದ್ದ ಸೀಮೆ ಎಣ್ಣೆ ಸುರಿದು ಬೆಂಕಿ ಇಟ್ಟಿದ್ದಾನೆ, ಅರುಣಾದೇವಿಯ ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಅಕ್ಕಪಕ್ಕದವರು ಆಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಸಧ್ಯ ಸ್ಥಳಕ್ಕಾಗಮಿಸಿ ಪೊಲೀಸರು, ಪ್ರಕರಣ ದಾಖಲಿಸಿದ್ದು , ತಲೆ ತಪ್ಪಿಸಿಕೊಂಡಿರುವ ಏಳುಮಲೈ ಗಾಗಿ ಹುಡುಕಾಟ ನಡೆದಿದೆ. ಇತ್ತ ಏನೂ ಮಾಡದ ತಪ್ಪಿಗೆ ಮಹಿಳೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ….////


Web Title : Man tried to burn alive Married woman, while She Not Accept illegal relationship
(Kannada News : Get Live News Alerts Online Today @ kannadanews.today – Read Latest India News / National NewsHeadlines, Breaking News in Kannada )

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile