Welcome To Kannada News Today

ಅಶಿಸ್ತಿನ ಕಾರಣ ದೆಹಲಿಯಲ್ಲಿ ಹಲವು ಮದ್ಯದಂಗಡಿಗಳು ಮತ್ತೇ ಬಂದ್

ದೆಹಲಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಾಗೂ ಅಶಿಸ್ತಿನಿಂದ ವರ್ತಿಸಿದ ಜನ, ಬಾರ್ ಕ್ಲೋಸ್ ಮಾಡಿಸಿದ ಪೊಲೀಸರು

🌐 Kannada News :

ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ 40 ದಿನಗಳ ಅಂತರದ ನಂತರ ತೆರೆಯಲಾದ ಅನೇಕ ಸರ್ಕಾರಿ ಮದ್ಯದಂಗಡಿಗಳನ್ನು ಮತ್ತೆ ಮುಚ್ಚಬೇಕಾಯಿತು, ಕಾರಣ ಮಳಿಗೆಗಳ ಹೊರಗೆ ಜಮಾಯಿಸಿದ ಜನರು ಸಾಮಾಜಿಕ ದೂರ ಅನುಸರಿಸಲಿಲ್ಲ, ಮತ್ತು ಪೊಲೀಸರು ಅಶಿಸ್ತಿನ ಗುಂಪನ್ನು ಚದುರಿಸಲು ಲಾಠಿ ಬಳಸಬೇಕಾಯಿತು.

ಎಣ್ಣೆ ಅಂಗಡಿ ಇವತ್ತು ತೆರೆಯುತ್ತೆ ಎಂದು ಜನರು ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಮದ್ಯದಂಗಡಿಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು.

ಅಧಿಕಾರಿಯೊಬ್ಬರ ಪ್ರಕಾರ, ಗೃಹ ಸಚಿವಾಲಯ (ಎಂಎಚ್‌ಎ) ನೀಡಿರುವ ಇತ್ತೀಚಿನ ಲಾಕ್‌ಡೌನ್ ಸಡಿಲಿಕೆಗೆ ಅನುಗುಣವಾಗಿ ಸರ್ಕಾರದಿಂದ ನಡೆಸಲ್ಪಡುವ ಸುಮಾರು 150 ಮದ್ಯದಂಗಡಿಗಳನ್ನು ಬೆಳಿಗ್ಗೆ 9 ರಿಂದ ಸಂಜೆ 6.30 ರವರೆಗೆ ತೆರೆಯಲು ಅವಕಾಶ ನೀಡಲಾಗಿದೆ.

ಆದರೆ ಸರ್ಕಾರಿ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿ ಇದೆ ಎಂದು ತಿಳಿಯದ ಅನೇಕ ಜನರು ಸಿಕ್ಕ ಸಿಕ್ಕ ಬಾರ್ ಗಾಲ ಮುಂದೆ ಜಮಾಯಿಸಿ ಪೊಲೀಸರಿಗೆ ತಲೆನೋವಾದರು. ಹೆಚ್ಚಿನ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಎಲ್ಲಾ ಮಳಿಗೆಗಳ ಹೊರಗೆ ಸಾಲುಗಟ್ಟಿ ನಿಂತಿದ್ದರು.

ಜನರು ಸಾಮಾಜಿಕ ದೂರ ಕಾಯ್ದುಕೊಳ್ಳದ ಮತ್ತು ಮಾಸ್ಕ್ ಧರಿಸದ ಮಾನದಂಡಗಳನ್ನು ಕಾಯ್ದುಕೊಳ್ಳಲು ವಿಫಲವಾದ ಕಾರಣ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಿ, ಮತ್ತೆ ಮದ್ಯದಂಗಡಿಗಳನ್ನು ಮುಚ್ಚಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರ ಮತ್ತು ಮಧ್ಯ ದೆಹಲಿಯಿಂದ ಇದೇ ರೀತಿಯ ಹಲವು ಪ್ರಕರಣಗಳು ವರದಿಯಾಗಿವೆ.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile