ಮಕ್ಕಳ ದತ್ತು ಸ್ವೀಕಾರಕ್ಕೆ ಮದುವೆ ಪ್ರಮಾಣ ಪತ್ರ ಅಗತ್ಯವಿಲ್ಲ: ಹೈಕೋರ್ಟ್

ಮಕ್ಕಳನ್ನು ದತ್ತು ಪಡೆಯಲು ಮದುವೆ ಪ್ರಮಾಣ ಪತ್ರದ ಅಗತ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಲಕ್ನೋ: ಮಕ್ಕಳನ್ನು ದತ್ತು ಪಡೆಯಲು ಮದುವೆ ಪ್ರಮಾಣ ಪತ್ರದ ಅಗತ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ಹಿಂದೂ ದತ್ತು ಮತ್ತು ನಿರ್ವಹಣೆ ಕಾಯಿದೆ 1956ರ ಪ್ರಕಾರ ಒಂಟಿ ಪೋಷಕರು ಕೂಡ ಮಗುವನ್ನು ದತ್ತು ಪಡೆಯಬಹುದು.

ಮಕ್ಕಳ ದತ್ತು ಸ್ವೀಕಾರಕ್ಕೆ ಸಂಬಂಧಿಸಿದ ಪ್ರಕರಣದ ಕುರಿತು ದ್ವಿಸದಸ್ಯ ನ್ಯಾಯಪೀಠ ಈ ವಿಷಯವನ್ನು ಬಹಿರಂಗಪಡಿಸಿದೆ. ಉತ್ತರ ಪ್ರದೇಶದ ವಾರಣಾಸಿಯ ತೃತೀಯಲಿಂಗಿ ರೀನಾ ಕಿನ್ನರ್ ಅವರು ಡಿಸೆಂಬರ್ 16, 2000 ರಂದು ಯುವಕನನ್ನು ವಿವಾಹವಾದರು. ದಂಪತಿಗಳು ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದರು.

ಅವರು ಮಗುವನ್ನು ದತ್ತು ಪಡೆಯಲು ಸಂಬಂಧಿಸಿದ ಅಧಿಕಾರಿಗಳ ಸಂಪರ್ಕಿಸಿದರು. ಆದರೆ, ಮಕ್ಕಳನ್ನು ದತ್ತು ಪಡೆಯಲು ಮದುವೆ ಪ್ರಮಾಣ ಪತ್ರದ ಅಗತ್ಯವಿದೆ ಎಂದು ಹೇಳಿದರು. ರೀನಾ ದಂಪತಿಗಳು ತಮ್ಮ ವಿವಾಹದ ನೋಂದಣಿಗಾಗಿ ಡಿಸೆಂಬರ್ 2021 ರಲ್ಲಿ ವಾರಣಾಸಿ ಜಿಲ್ಲಾ ಸಬ್-ರಿಜಿಸ್ಟ್ರಾರ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರು. ಆದರೆ, ಅದು ಬಾಕಿ ಉಳಿದಿದ್ದರಿಂದ ಅವರು ಅಲಹಾಬಾದ್‌ ಹೈಕೋರ್ಟ್‌ ಮೊರೆ ಹೋಗಿದ್ದರು.

ನ್ಯಾಯಮೂರ್ತಿ ವಿವೇಕ್ ವರ್ಮಾ ಮತ್ತು ನ್ಯಾಯಮೂರ್ತಿ ಡಾ.ಕೌಶಲ್ ಜಯೇಂದ್ರ ಠಾಕ್ರೆ ಅವರನ್ನೊಳಗೊಂಡ ಪೀಠವು ಸೆಪ್ಟೆಂಬರ್ 9 ರಂದು ಅರ್ಜಿಯ ವಿಚಾರಣೆ ನಡೆಸಿತು. ಮಕ್ಕಳ ದತ್ತು ಪಡೆಯಲು ಮದುವೆ ಪ್ರಮಾಣ ಪತ್ರದ ಅಗತ್ಯವಿಲ್ಲ ಎಂದು ಪೀಠ ಹೇಳಿದೆ. ಹಿಂದೂ ದತ್ತು ಮತ್ತು ನಿರ್ವಹಣಾ ಕಾಯಿದೆ 1956ರ ಪ್ರಕಾರ ಒಂಟಿ ಪೋಷಕರು ಕೂಡ ಮಗುವನ್ನು ದತ್ತು ತೆಗೆದುಕೊಳ್ಳಬಹುದಾಗಿದೆ.

Follow Us on : Google News | Facebook | Twitter | YouTube