ಕಾಂಗ್ರೆಸ್ ನಿಂದ ‘ಟ್ರಾಕ್ಟರ್ ರ್ಯಾಲಿ’ ಅಪಹಾಸ್ಯ ಮಾಡಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರಾಹುಲ್ ಗಾಂಧಿಯವರ 'ಟ್ರಾಕ್ಟರ್ ರ್ಯಾಲಿ'

ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆ ರಾಜಕೀಯ ಪ್ರತಿಭಟನೆ, ಕಾನೂನುಗಳಿಂದ ಸ್ವಾರ್ಥಿ ಹಿತಾಸಕ್ತಿಗಳಿಗೆ ಧಕ್ಕೆ ಉಂಟಾದ ನಾಯಕರು ಟ್ರಾಕ್ಟರ್ ರ್ಯಾಲಿ ಯನ್ನು ಆಯೋಜಿಸಿದ್ದರು. ಇದು ರೈತರನ್ನು ದಾರಿ ತಪ್ಪಿಸುವ ಪ್ರತಿಭಟನೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅಪಹಾಸ್ಯ ಮಾಡಿದ್ದಾರೆ.

( Kannada News ) ನವದೆಹಲಿ : ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರಾಹುಲ್ ಗಾಂಧಿಯವರ ‘ಟ್ರಾಕ್ಟರ್ ರ್ಯಾಲಿ’ ಯನ್ನು ಅಪಹಾಸ್ಯ ಮಾಡಿರುವ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ. ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆ ರಾಜಕೀಯ ಪ್ರತಿಭಟನೆಯಾಗಿತ್ತು. ಈ ಕಾನೂನುಗಳಿಂದ ಸ್ವಾರ್ಥಿ ಹಿತಾಸಕ್ತಿಗಳಿಗೆ ಧಕ್ಕೆ ಉಂಟಾದ ನಾಯಕರು ರ್ಯಾಲಿಯನ್ನು ಆಯೋಜಿಸಿದ್ದರು ಎಂದಿದ್ದಾರೆ.

ಅಲ್ಲದೆ, ಮೆತ್ತನೆಯ ಸೋಫಾ ಮೇಲೆ ಕೂತು ಟ್ರ್ಯಾಕ್ಟರ್‌ನಲ್ಲಿ ಪ್ರತಿಭಟನೆ ಮಾಡುವುದು ಪ್ರತಿಭಟನೆಯಲ್ಲ. ಅದು ಪ್ರತಿಭಟನಾ ಹೆಸರಿನ ಮೇಲೆ ಮಾಡಿರುವ ಪ್ರವಾಸ ಎಂದಿದ್ದಾರೆ. ಇದು ರೈತರನ್ನು ದಾರಿ ತಪ್ಪಿಸುವ ಪ್ರತಿಭಟನೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

Minister Hardeep Puri On Rahul Gandhi Tractor Rally
Minister Hardeep Puri On Rahul Gandhi Tractor Rally

ಕೇಂದ್ರ ತಂದಿರುವ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್‌ನಲ್ಲಿ ಮೂರು ದಿನಗಳ ಕಾಲ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಆದರೆ, ರಾಹುಲ್ ‘ಕುಶನ್ ಸೋಫಾ’ದ ಮೇಲೆ ಕುಳಿತು ಟ್ರ್ಯಾಕ್ಟರ್ ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Scroll Down To More News Today