ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ಸ್ಮರಿಸಿದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೀಗ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ಸ್ಮರಿಸಿಕೊಂಡಿದ್ದಾರೆ.

( Kannada News Today ) : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೀಗ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಅವರನ್ನೆಲ್ಲ ಈಗ ಮೋದಿ ಸ್ಮರಿಸಿಕೊಳ್ಳಲು ಕಾರಣ ಸಂವಿಧಾನ ದಿನ.

ಸಂವಿಧಾನ ದಿನದ ಹಿನ್ನೆಲೆಯಲ್ಲಿ ಅವರು ಗುರುವಾರ ಆಲ್ ಇಂಡಿಯಾ ಪ್ರಿಸೈಡಿಂಗ್ ಆಫೀಸರ್ಸ್ ಕಾನ್ಫರೆನ್ಸ್ನಲ್ಲಿ ಮಾತನಾಡಿದರು. ಇದು ಗಾಂಧಿ ಅವರ ಸ್ಫೂರ್ತಿ ಹಾಗೂ ವಲ್ಲಭಭಾಯಿ ಪಟೇಲ್ ಅವರ ಬದ್ಧತೆಯನ್ನು ಸ್ಮರಿಸಿಕೊಳ್ಳುವ ದಿನ ಎಂದು ಮೋದಿ ಹೇಳಿದರು.

ನಮ್ಮ ಸಂವಿಧಾನ ಹಲವು ಮುಖ್ಯ ಲಕ್ಷಣಗಳನ್ನು ಹೊಂದಿದೆ. ಅದರಲ್ಲಿ ಅತ್ಯಂತ ವಿಶೇಷವಾದದ್ದು ಕರ್ತವ್ಯಕ್ಕೆ ನೀಡಿರುವ ಮಹತ್ವ. ಮಹಾತ್ಮ ಗಾಂಧಿ ಈ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಿದ್ದರು. ಅವರು ಕರ್ತವ್ಯ ಮತ್ತು ಹಕ್ಕುಗಳ ಮಧ್ಯೆ ಇರುವ ನಿಕಟ ಸಂಬಂಧ ಗುರುತಿಸಿದ್ದರು. ನಾವು ನಮ್ಮ ಕರ್ತವ್ಯವನ್ನು ನಿಭಾಯಿಸಿದರೆ ಅದು ನಮ್ಮ ಹಕ್ಕುಗಳನ್ನು ರಕ್ಷಿಸುತ್ತದೆ ಎಂದು ಗಾಂಧಿ ಕಂಡುಕೊಂಡಿದ್ದರು ಎಂದು ಮೋದಿ ಹೇಳಿದರು.

2015ರಲ್ಲಿ ನ. 26ಅನ್ನು ಸಂವಿಧಾನ ದಿನ ಎಂದು ಪರಿಗಣಿಸಿ ಆಚರಿಸಲಾರಂಭಿಸಿದ್ದನ್ನು ಸ್ಮರಿಸಿಕೊಂಡ ಮೋದಿ, ತಾವು ಮುಖ್ಯಮಂತ್ರಿ ಆಗಿದ್ದಾಗ ನಡೆಸಿದ ಸಂವಿಧಾನ ಗೌರವ ಯಾತ್ರೆಯನ್ನೂ ನೆನಪಿಸಿಕೊಂಡರು.

ಆನೆಯ ಮೇಲೆ ಸಂವಿಧಾನವನ್ನು ಇರಿಸಿ ಮೆರವಣಿಗೆ ಹೊರಡುವುದನ್ನು 2010ರಲ್ಲಿ ಗುಜರಾತ್‌ನಲ್ಲಿ ನಡೆಸಿ ಸಂವಿಧಾನ ಗೌರವ ಯಾತ್ರೆ ನಡೆಸಿದ್ದ ಬಗ್ಗೆ ಹೇಳಿಕೊಂಡರು.