Welcome To Kannada News Today

‘ರಾಜಮಾತಾ’ ಸ್ಮರಣಾರ್ಥ 100 ರೂ. ನಾಣ್ಯ ಬಿಡುಗಡೆ ಮಾಡಲಿರುವ ಪ್ರಧಾನಿ ಮೋದಿ

Rajamata vijaya raje : ರಾಜಮಾತಾ ವಿಜಯ್ ರಾಜೇ ಸಿಂಧಿಯಾ ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ 100 ರೂ. ನಾಣ್ಯ ಬಿಡುಗಡೆ

🌐 Kannada News :

( Kannada News ) : ನವದೆಹಲಿ: ರಾಜಮಾತಾ ವಿಜಯ್ ರಾಜೇ ಸಿಂಧಿಯಾ ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 100 ರೂ.ಗಳ ನಾಣ್ಯವನ್ನು ಸೋಮವಾರ ಬಿಡುಗಡೆ ಮಾಡಲಿದ್ದಾರೆ.

ರಾಜಮಾತಾ ವಿಜಯ್ ರಾಜೇ ಸಿಂಧಿಯಾ ( Rajmata Vijaya Raje Scindia ) ಜನ್ಮಶತಮಾನೋತ್ಸವದ ವರ್ಚುವಲ್ ಸಮಾರಂಭದಲ್ಲಿ ಪ್ರಧಾನಿ ಮೋದಿ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ರಾಜಮಾತಾ ವಿಜಯ್ ರಾಜೇ ಸಿಂಧಿಯಾ ಅವರನ್ನು ಗ್ವಾಲಿಯರ್ ರಾಣಿ ತಾಯಿ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದ್ದು, ವರ್ಚುವಲ್ ಪ್ಲಾಟ್‌ಫಾರ್ಮ್ ಮೂಲಕ ಎಂ.ಎಸ್. ಸಿಂಧಿಯಾ ಅವರ ಕುಟುಂಬ ಸದಸ್ಯರು ಮತ್ತು ದೇಶಾದ್ಯಂತದ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ರಾಜಮಾತಾ ವಿಜಯ್ ರಾಜೇ ಸಿಂಧಿಯಾ ಜನ್ಮ ಶತಮಾನೋತ್ಸವದ ಸ್ಮರಣಾರ್ಥ 100 ರೂ.ಗಳ ವಿಶೇಷ ನಾಣ್ಯವನ್ನು ಹಣಕಾಸು ಸಚಿವಾಲಯದಲ್ಲಿ ಮುದ್ರಿಸಲಾಯಿತು.

ರಾಜಮಾತಾ ವಿಜಯ್ ರಾಜೇ ಸಿಂಧಿಯಾ ಅವರ ಭಾವಚಿತ್ರ ಇರುವ 100 ರೂ. ನಾಣ್ಯವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.

ಗ್ವಾಲಿಯರ್ ರಾಜಮನೆತನದ ರಾಜಮಾತೆ ರಾಜಮಾತಾ ವಿಜಯ್ ರಾಜೇ ಸಿಂಧಿಯಾ ಅವರು ಅಕ್ಟೋಬರ್ 12, 1919 ರಂದು ಜನಿಸಿದರು. ಇವರ ಮೂಲ ಹೆಸರು ಲೇಖಾ ದಿವ್ಯೇಶ್ವರಿ ದೇವಿ. ಗದವಾಲಿಯರ್ ರಾಜಮನೆತನದ ಕೊನೆಯ ಮಹಾರಾಜ ಜೀವಾಜಿರಾವ್ ಸಿಂಧಿಯಾ ಅವರ ಪತ್ನಿಯಾಗಿದ್ದ ವಿಜಯ್ ರಾಜೇ ಸಿಂಧಿಯಾ, ಜನಸಂಘದಿಂದ ಲೋಕಸಭೆ ಮತ್ತು ರಾಜ್ಯಸಭೆಗೆ ಆಯ್ಕೆಯಾಗಿದ್ದರು.

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile