Monkeypox 35 ಸಾವಿರ ದಾಟಿದ ಮಂಕಿಪಾಕ್ಸ್ ಪ್ರಕರಣಗಳು, 12 ಮಂದಿ ಸಾವು; WHO ಆತಂಕ

Monkeypox: ವಿಶ್ವಾದ್ಯಂತ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಬುಧವಾರದವರೆಗೆ, 92 ದೇಶಗಳಲ್ಲಿ 35,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ.

Monkeypox | ವಿಶ್ವಾದ್ಯಂತ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಬುಧವಾರದವರೆಗೆ, 92 ದೇಶಗಳಲ್ಲಿ 35,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. 12 ಜನರು ಸಾವನ್ನಪ್ಪಿದ್ದಾರೆ. ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಪ್ರಕರಣಗಳ ಸಂಖ್ಯೆ 20 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.

ಕಳೆದ ವಾರ ಸುಮಾರು 7,500 ಜನರು ಮಂಕಿಪಾಕ್ಸ್ ತುತ್ತಾಗಿದ್ದಾರೆ. ಯುರೋಪ್ ಮತ್ತು ಅಮೆರಿಕದಲ್ಲಿ ಬಹುತೇಕ ಎಲ್ಲಾ ಪ್ರಕರಣಗಳು ಬೆಳಕಿಗೆ ಬಂದಿವೆ. ಪುರುಷ ಸಲಿಂಗಕಾಮದಿಂದ ಮಂಕಿಪಾಕ್ಸ್ ಪ್ರಕರಣಗಳು ಉಂಟಾಗುತ್ತವೆ ಎಂದು ಟೆಡ್ರೊಸ್ ಘೆಬ್ರೆಯೆಸಸ್ ಹೇಳಿದ್ದಾರೆ.

ಇದನ್ನೂ ಓದಿ : ನಟ ದರ್ಶನ್ ಪಾಲಿಗೆ ಮೀಡಿಯಾ ಬ್ಯಾನ್ ವರದಾನವಾಯ್ತು

Monkeypox 35 ಸಾವಿರ ದಾಟಿದ ಮಂಕಿಪಾಕ್ಸ್ ಪ್ರಕರಣಗಳು, 12 ಮಂದಿ ಸಾವು; WHO ಆತಂಕ

ಬಹುತೇಕ ಎಲ್ಲಾ ದೇಶಗಳು ಮಂಕಿಪಾಕ್ಸ್ ಅನ್ನು ಎದುರಿಸಲು ಸಿದ್ಧರಾಗಬೇಕು ಎಂದು ಟೆಡ್ರೊಸ್ ಹೇಳಿದರು. ಪೀಡಿತ ಸಾಮಾಜಿಕ ವರ್ಗಗಳಿಂದ ಲಸಿಕೆಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಹೇಳಿದರು. ಆದಾಗ್ಯೂ, ಆ ದೇಶಗಳಿಂದ ಪಡೆದ ಡೇಟಾವು ಮಂಕಿಪಾಕ್ಸ್ ವೈರಸ್ ಮೇಲೆ ಲಸಿಕೆಗಳ ಪರಿಣಾಮವು ಸೀಮಿತವಾಗಿದೆ ಎಂದು ತೋರಿಸುತ್ತದೆ ಎಂದು ಅವರು ಹೇಳಿದರು.

ಕರೋನಾ ಸಾಂಕ್ರಾಮಿಕ ರೋಗದಂತೆ ವಿಶ್ವದ ದೇಶಗಳ ನಡುವೆ ಮಂಕಿಪಾಕ್ಸ್ ತಡೆಗಟ್ಟಲು ಬಳಸುವ ಲಸಿಕೆಗಳ ಲಭ್ಯತೆಯಲ್ಲಿ ಅಸಮಾನತೆಗಳು ಮರುಕಳಿಸುತ್ತವೆ ಎಂದು ಟೆಡ್ರೊಸ್ ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ : ವೆಬ್ ಸ್ಟೋರೀಸ್

monkeypox outbreak over 35000 cases and 12 deaths globally

Related Stories