ಟ್ವಿಟರ್ ಪ್ರಭಾವಿಗಳ ಪೈಕಿ ಮೋದಿಗೆ ಎರಡನೇ ಸ್ಥಾನ.. ಸಚಿನ್ ಗೆ 35ನೇ ಸ್ಥಾನ

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಭಾರತೀಯ ಕ್ರಿಕೆಟ್ ಆರಾಧ್ಯದೈವ..ಮಾಸ್ಟರ್ ಬ್ಲಾಸ್ಟರ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್.. ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಟಾಪ್-50ರಲ್ಲಿ ಸ್ಥಾನ ಪಡೆದಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಭಾರತೀಯ ಕ್ರಿಕೆಟ್ ಆರಾಧ್ಯದೈವ..ಮಾಸ್ಟರ್ ಬ್ಲಾಸ್ಟರ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್.. ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಟಾಪ್-50ರಲ್ಲಿ ಸ್ಥಾನ ಪಡೆದಿದ್ದಾರೆ. ಕನ್ಸ್ಯೂಮರ್ ಇಂಟೆಲಿಜೆನ್ಸ್ ಕಂಪನಿ ಬ್ರ್ಯಾಂಡ್ ವಾಚ್ ನಡೆಸಿದ ಸಮೀಕ್ಷೆಯಲ್ಲಿ ಸಚಿನ್ ತೆಂಡೂಲ್ಕರ್ 35ನೇ ಸ್ಥಾನ ಪಡೆದಿದ್ದಾರೆ.

ಅಮೆರಿಕದ ನಟರಾದ ಡೈ ಜಾನ್ಸನ್, ಲಿಯೊನಾರ್ಡ್ ಡಿಕಾಪ್ರಿಯೊ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಪತ್ನಿ ಮಿಚೆಲ್ ಒಬಾಮಾ ಅವರಿಗಿಂತ ತೆಂಡೂಲ್ಕರ್ ಮುಂದಿದ್ದಾರೆ.

ತೆಂಡೂಲ್ಕರ್ ಅವರು ಗ್ರಾಮೀಣ ಮತ್ತು ನಗರ ಭಾರತದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಕ್ರೀಡೆಗಳಲ್ಲಿ ಅನೇಕ ಉಪಕ್ರಮಗಳನ್ನು ಬೆಂಬಲಿಸಿದ್ದಾರೆ. ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ, ಮತ್ತು 100 ಶತಕಗಳನ್ನು ಗಳಿಸಿದ ಏಕೈಕ ಆಟಗಾರ, ODI ನಲ್ಲಿ ದ್ವಿಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್, ಟೆಸ್ಟ್ ಮತ್ತು ODI ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಹೊಂದಿರುವವರು ಮತ್ತು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 30,000 ರನ್‌ಗಳನ್ನು ಪೂರೈಸಿದ ಏಕೈಕ ಆಟಗಾರ.

. ಅಮೆರಿಕದ ಗಾಯಕಿ ಟೇಲರ್ ಸ್ವಿಫ್ಟ್ ಮೊದಲ ಸ್ಥಾನದಲ್ಲಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಎರಡನೇ ಸ್ಥಾನದಲ್ಲಿದ್ದಾರೆ.

ತಮ್ಮ ಬ್ರ್ಯಾಂಡ್‌ಗಳ ಆನ್‌ಲೈನ್ ಉಪಸ್ಥಿತಿಯನ್ನು ವಿಶ್ಲೇಷಿಸಲು ಕಂಪನಿಗಳಿಗೆ ಮಾಹಿತಿ ಮತ್ತು ವಿಧಾನಗಳನ್ನು ಒದಗಿಸಲು ಬ್ರಾಂಡ್‌ವಾಚ್ ಸಾಮಾಜಿಕ ಮಾಧ್ಯಮ ಡೇಟಾವನ್ನು ಬಳಸುತ್ತದೆ.