Welcome To Kannada News Today

ಕುಡುಕ ಗಂಡನ ಕಿರುಕುಳದಿಂದ ತಾಯಿ ಮತ್ತು ಮಗಳು ಆತ್ಮಹತ್ಯೆ

ಕುಡುಕ ಗಂಡನ ಕಿರುಕುಳದಿಂದ ಚಿತ್ತೂರಿನಲ್ಲಿ ತಾಯಿ ಮತ್ತು ಮಗಳು ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

🌐 Kannada News :

ಆಂಧ್ರಪ್ರದೇಶ : ಬಾರ್ ಓಪನ್ ಆಗಿದ್ದೆ ತಡ ಹೊಟ್ಟೆ ತುಂಬಾ ಸರಕು ಏರಿಸಿ ಕೊಂಡು ಬಂದ ಚೋಕ್ಕಲಿಂಗಮ್ ಎನ್ನುವ ವ್ಯಕ್ತಿ ತನ್ನ ಹೆಂಡತಿ ಭಾರತಿ ಮತ್ತು ಮಗಳು ನಂದಿನಿಗೆ ಹಿಂಸೆ ನೀಡಿದ್ದಾನೆ.

ಇಷ್ಟು ದಿವಸ ಬಂದ್ ಆಗಿದ್ದ ಬಾರ್ ಬಾಗಿಲು ತೆರೆದದ್ದೇ ತಡ ಗಂಟಲು ಪೂರ್ತಿ ಕುಡಿದ ಕುಡುಕ ಮಹಾಶಯ ಬಾರ್ ಓಪನ್ ಆದ ಮೊದಲ ದಿನ ಸೋಮವಾರ ಹೆಂಡತಿ ಮಗಳಿಗೆ ಕಿರುಕುಳ ನೀಡಿದ್ದಾನೆ. ಚೋಕ್ಕಲಿಂಗಮ್ ಹೇಳಿಕೇಳಿ ಕುಡಿತದ ಚಟಕ್ಕೆ ಬಿದ್ದಿದ್ದ, ಇಷ್ಟು ದಿವಸ ಎಣ್ಣೆ ಸಿಗದೇ ವಿಚಲಿತನಾಗಿದ್ದ, ಆದ್ರೆ ಬಾರ್ ಓಪನ್ ಆದ ಖುಷಿಯಲ್ಲಿ ಫುಲ್ ಟೈಟಾಗಿ ಮನೆಗೆ ಬಂದೋನು ಕಿರಿಕ್ ಮಾಡಿದ್ದ.

ಕೋರೋನ ವೈರಸ್ ನಿಂದ ಮದ್ಯ ಮಾರಾಟ ನಿಷೇಧ ಆಗಿದ್ದರಿಂದ ಮದ್ಯ ಮಾರಾಟದ ಯಾವಾಗ ಪ್ರಾರಂಭ ಆಗುತ್ತೋ ಅಂತ ಕಾಯುತ್ತಿದ್ದ. ಸೋಮವಾರ ಕುಡಿದು ಬಂದು ತನ್ನ ಹೆಂಡತಿ ಮತ್ತು ಮಗಳ ಮೇಲೆ ಅಮಾನವೀಯವಾಗಿ ಕಿರುಕುಳ ಕೊಟ್ಟಿದ್ದಾನೆ. ಇವನ ಕಿರುಕುಳವನ್ನು ಹೆಂಡತಿ ಮತ್ತು ಮಗಳು ಸಹಿಸಿಕೊಳ್ಳಲಾಗದೆ ಸೋಮವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಬಂದ ಪೊಲೀಸರು, ಚೊಕ್ಕಲಿಂಗಂ ಅನ್ನು ವಶಕ್ಕೆ ಪಡೆದಿದ್ದಾರೆ. ಹಾಗೂ ಶವಗಳನ್ನು ಪಲಮನೇರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಪಲಮನೇರಿನ ಡಿಎಸ್ಪಿ ಆರೀಫ್ ಉಲ್ಲಾ ಹೇಳಿದ್ದಾರೆ.

ದಿವ್ಯಶ್ರೀ. ವಿ
ಬೆಂಗಳೂರು

📱 Latest Kannada News ಗಳಿಗಾಗಿ Kannada News Today App ಡೌನ್ ಲೋಡ್ ಮಾಡಿಕೊಳ್ಳಿ.
📣 All Kannada News Now in our Facebook Page.
Contact for web design services Mobile