ಭೀಕರ ಪ್ರವಾಹ, ಸತ್ತರೂ ತನ್ನ ಮಗುವಿನ ಕೈ ಬಿಡದ ತಾಯಿ

Mother held infant son's hand tight even in death in flood hit Kerala

ಭೀಕರ ಪ್ರವಾಹ, ಸತ್ತರೂ ತನ್ನ ಮಗುವಿನ ಕೈ ಬಿಡದ ತಾಯಿ – Mother held infant son’s hand tight even in death in flood hit Kerala

ಭೀಕರ ಪ್ರವಾಹ, ಸತ್ತರೂ ತನ್ನ ಮಗುವಿನ ಕೈ ಬಿಡದ ತಾಯಿ

  • ಮಣ್ಣಿನಲ್ಲಿ ಸಿಲುಕಿದ್ದ ತಾಯಿ, ಮಗುವಿನ ಶವಗಳನ್ನು ನೋಡುವುದು ರಕ್ಷಣಾ ಸಿಬ್ಬಂದಿಗಳಿಗೆ ಹೃದಯ ಕದಡುವಂತಿತ್ತು

ಕನ್ನಡ ನ್ಯೂಸ್ ಟುಡೇ : ಮಲಪ್ಪುರಂ (ಕೇರಳ): ಕೇರಳ ರಾಜ್ಯ ಮತ್ತೊಮ್ಮೆ ಪ್ರವಾಹಕ್ಕೆ ನಲುಗಿ ಹೋಗಿದೆ. ಈ ವರೆಗೆ ಸುಮಾರು 60 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ಈಗ ನಡೆದಿರುವ ಹೃದಯ ವಿದ್ರಾವಕ ಘಟನೆ ಎಂತಹವರ ಹೃದಯವನ್ನು ನೀರಾಗಿಸುತ್ತದೆ. ತಾಯಿ ತನ್ನ ಮನಸ್ಸು ಎಷ್ಟು ಶ್ರೇಷ್ಠ ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾಳೆ.

ಕೇರಳದ ಮಲ್ಲಾಪುರಂ ಜಿಲ್ಲೆಯಲ್ಲಿನ ಪ್ರವಾಹದಿಂದ ಬಾರಿ ಪ್ರಾಣಹಾನಿ ಸಂಭವಿಸಿದೆ. ಜಿಲ್ಲೆಯ ಬಹುಪಾಲು ಗುಡ್ಡಗಾಡು ಆಗಿದ್ದರಿಂದ, ಭಾರಿ ಮಳೆ ಮತ್ತು ಪ್ರವಾಹದ ದಿನಗಳಲ್ಲಿ ಹಲವಾರು ಭೂಕುಸಿತಗಳು ಸಂಭವಿಸಿವೆ. ಮಲ್ಲಾಪುರಂನ ಕೊಟ್ಟಕುನ್ನು ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಭೂಕುಸಿತ ಸಂಭವಿಸಿದಾಗ, ಹತ್ತಿರದ ಮನೆಯೊಂದಕ್ಕೆ ದೊಡ್ಡ ಪ್ರಮಾಣದ ನೀರಿನ ಹರಿವು ಅಪ್ಪಳಿಸಿ, ಆ ಮನೆಯಲ್ಲಿದ್ದ ತಾಯಿ ಮತ್ತು ಮಗುವನ್ನ ಬಲಿ ಪಡೆದಿದೆ, ಆಶ್ಚರ್ಯ ರೀತಿಯಲ್ಲಿ ಪತಿ ಶರತ್ ಅಪಘಾತದಿಂದ ಪಾರಾಗಿದ್ದಾರೆ.

ಭೀಕರ ಪ್ರವಾಹ, ಸತ್ತರೂ ತನ್ನ ಮಗುವಿನ ಕೈ ಬಿಡದ ತಾಯಿಎರಡು ದಿನಗಳ ಹಿಂದೆ ಭಾರಿ ಭೂಕುಸಿತದಿಂದ ನಡುಗಿದ ಗುಡ್ಡಗಾಡು ಪ್ರದೇಶವಾದ ಹತ್ತಿರದ ಕೊಟ್ಟಕ್ಕನ್ನು ಎಂಬಲ್ಲಿ ಅನೇಕ ರಕ್ಷಣಾ ಸಿಬ್ಬಂದಿಗಳು ಕಣ್ಣೀರು ಸುರಿಸಿದ್ದಾರೆ. 21 ವರ್ಷದ ಗೀತ ಎಂಬ ಮಹಿಳೆ ತನ್ನ ಒಂದೂವರೆ ವರ್ಷದ ಮಗ ಧ್ರುವ್ ಜೊತೆ ಮಲಗಿದ್ದಾಗ ಸಂಭವಿಸಿದ ಅನಿರೀಕ್ಷಿತ ಪ್ರವಾಹದಿಂದ ಸಾವನ್ನಪ್ಪಿದ್ದಾರೆ.

ಹಲವು  ಗಂಟೆಗಳ ಕಾಲ ನಡೆದ ಶೋಧದ ನಂತರ, ಶರತ್ ಅವರ ಪತ್ನಿ ಗೀತ ಮತ್ತು ಮಗುವಿನ ಶವಗಳನ್ನು ರಕ್ಷಣಾ ಸಿಬ್ಬಂದಿ ಪತ್ತೆ ಹಚ್ಚಿ ಹೊರ ತೆಗೆದಿದ್ದಾರೆ, ಆದರೆ ಮಣ್ಣಿನ ರಾಶಿಯಲ್ಲಿ ಸಿಲುಕಿದ್ದ ತಾಯಿ ಮತ್ತು ಮಗುವಿನ ಶವಗಳನ್ನು ನೋಡುತ್ತಿದ್ದಂತೆ ಹೃದಯ ಕದಡುವಂತಿತ್ತು, ಪರಿಹಾರ ಕಾರ್ಯದ ಭಾಗವಾಗಿ ಪ್ರೊಕ್ಲೀನ್‌ಗಳೊಂದಿಗೆ ಮಣ್ಣನ್ನು ತೆಗೆಯುತ್ತಿದ್ದಂತೆ ಮೃತ ದೇಹಗಳನ್ನು ನೋಡಲಾಯಿತು. ಆ ಸಂದರ್ಭದಲ್ಲಿ, ತಾಯಿ ತನ್ನ ಮಗುವನ್ನು ಉಳಿಸಲು ಪ್ರಯತ್ನಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತಿತ್ತು. ತಾಯಿ ಸಾವಿನ ಕೊನೆ ಗಳಿಗೆಯಲ್ಲಿಯೂ ಸಹ ಮಗುವನ್ನು ಕಾಪಾಡಲು ಪಟ್ಟ ಪ್ರಯತ್ನ ಕಾಣುತ್ತಿತ್ತು. ಆಕೆ ಮಗುವನ್ನು ಬಿಗಿದಪ್ಪಿದ್ದಳು. 

ಕೊನೆಗಳಿಗೆಯಲ್ಲಿ ಮಗುವನ್ನು ಉಳಿಸುವ ತಾಯಿಯ ಪ್ರಯತ್ನ ಹಾಗೂ ಅವರ ಶವಗಳನ್ನು ನೋಡಿದ ಗೀತಾಳ ಪತಿ ಕಣ್ಣೀರು ಸುರಿಸಿದರು. ಕಳೆದ ವಾರ ಭಾರಿ ಮಳೆ ಮತ್ತು ಸರಣಿ ಭೂಕುಸಿತಗಳಲ್ಲಿ ವ್ಯಾಪಕ ನಾಶವನ್ನು ಕಂಡಿದ್ದ ಮಲಪ್ಪುರಂನ ದುರ್ಬಲ ಪ್ರದೇಶವಾದ ಕೊಟ್ಟಕ್ಕನ್ನು ಎಂಬಲ್ಲಿ ಬಾಡಿಗೆ ಮನೆಯಲ್ಲಿ ಶರತ್ ಮತ್ತು ಗೀತ ತಂಗಿದ್ದರು.////

Web Title : Mother held infant son’s hand tight even in death in flood hit Kerala