Video: ಚಲಿಸುವ ರೈಲು ಹತ್ತಲು ಹೋಗಿ ಜಾರಿಬಿದ್ದ ಮಹಿಳೆ, ರಕ್ಷಿಸಿದ ಆರ್‌ಪಿಎಫ್ ಕಾನ್‌ಸ್ಟೇಬಲ್

Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದ ಮಹಿಳೆಯ ಜೀವ ಉಳಿಸಿದ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್ ಪಿಎಫ್) ಕಾನ್ ಸ್ಟೇಬಲ್ ಪ್ರಕರಣ ಇತ್ತೀಚೆಗೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ.

🌐 Kannada News :

ಮುಂಬೈ (Video): ಚಲಿಸುತ್ತಿರುವ ರೈಲು ಹತ್ತಲು ಹೋಗಿ ಕಾಲು ಜಾರಿ ಬಿದ್ದ ಮಹಿಳೆಯ ಜೀವ ಉಳಿಸಿದ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್ ಪಿಎಫ್) ಕಾನ್ ಸ್ಟೇಬಲ್ ಪ್ರಕರಣ ಇತ್ತೀಚೆಗೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಮುಂಬೈನ ಸ್ಯಾಂಡ್ ಹರ್ಸ್ಟ್ ರಸ್ತೆ ರೈಲ್ವೇ ನಿಲ್ದಾಣದಲ್ಲಿ ಗುರುವಾರ ಚಲಿಸುತ್ತಿದ್ದ ರೈಲಿಗೆ ಹತ್ತಲು ಹೋಗಿ 50 ವರ್ಷದ ಮಹಿಳೆ ಜಾರಿಬಿದ್ದಿದ್ದಾಳೆ.

ಕೆಳಗೆ ಬಿದ್ದ ಮಹಿಳೆ ರೈಲು ಪ್ಲಾಟ್‌ಫಾರ್ಮ್ ಮಧ್ಯಕ್ಕೆ ಜಾರಿಬೀಳುತ್ತಿದ್ದಂತೆ, ಹತ್ತಿರದ ಆರ್‌ಪಿಎಫ್ ಕಾನ್ಸ್‌ಟೇಬಲ್ ಸಪ್ನಾ ಗೋಲ್ಕರ್ ತಕ್ಷಣ ಪ್ರತಿಕ್ರಿಯಿಸಿ ಮಿಂಚಿನ ವೇಗದಲ್ಲಿ ಮುಂದೆ ಬಂದು ಮಹಿಳೆಯನ್ನು ಬದಿಗೆ ಎಳೆದು ರಕ್ಷಿಸಿದರು. ರೈಲ್ವೆ ಪೊಲೀಸ್ ಪಡೆ ಇತ್ತೀಚೆಗೆ ಆರ್‌ಪಿಎಫ್ ಕಾನ್ಸ್‌ಟೇಬಲ್ ಸಪ್ನಾ ಗೋಲ್ಕರ್ ಮಹಿಳಾ ಪ್ರಯಾಣಿಕರನ್ನು ರಕ್ಷಿಸುವ ಸಿಸಿಟಿವಿ ದೃಶ್ಯಾವಳಿಗಳನ್ನು ಟ್ವೀಟ್ ಮಾಡಿದೆ. ಕಾನ್ಸಟೇಬಲ್ ಸಪ್ನಾ ಗೋಲ್ಕರ್ ಧೈರ್ಯದಿಂದ ಮಹಿಳೆಯರ ಜೀವ ಉಳಿಸಿದ್ದಕ್ಕಾಗಿ ಆರ್‌ಪಿಎಫ್ ಪ್ರಶಂಸಿಸಿದೆ.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today