ವೈರಲ್ ವೀಡಿಯೋ: ಪೊರಕೆ ಹಿಡಿದು ರಸ್ತೆ ಗುಡಿಸಿದ ಟ್ರಾಫಿಕ್ ಪೊಲೀಸ್
ಟ್ರಾಫಿಕ್ ಪೋಲೀಸ್ ರಸ್ತೆ ಗುಡಿಸುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟಿಜನ್ಗಳು ಶ್ಲಾಘಿಸಿದ್ದಾರೆ
ನವದೆಹಲಿ: ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಕೈಯಲ್ಲಿ ಪೊರಕೆ ಹಿಡಿದು ರಸ್ತೆ ಗುಡಿಸುತ್ತಿದ್ದ ದೃಶ್ಯ ಕಂಡು ಬಂದಿದೆ. ರಸ್ತೆಗೆ ಬಿದ್ದ ಜಲ್ಲಿಕಲ್ಲುಗಳನ್ನು ಸ್ವಚ್ಛಗೊಳಿಸಿದ್ದಾರೆ. ಐಎಎಸ್ ಅಧಿಕಾರಿಯೊಬ್ಬರು ಟ್ವೀಟ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಲ್ಲಿಕಲ್ಲು ಸಾಗಿಸುತ್ತಿದ್ದ ವಾಹನದಿಂದ ರಸ್ತೆಗೆ ಸಣ್ಣ ಸಣ್ಣ ಕಲ್ಲುಗಳು ಬಿದ್ದಿವೆ. ದ್ವಿಚಕ್ರ ವಾಹನ ಸವಾರರು ಟೈರ್ಗಳು ಜಾರಿ ಬಿದ್ದು ಪಂಕ್ಚರ್ ಆಗುವ ಅಥವಾ ಬೀಳುವ ಅಪಾಯವಿದೆ ಎಂದು ಅರಿತ ಸಂಚಾರಿ ಪೊಲೀಸ್ ತಕ್ಷಣ ಸ್ಪಂದಿಸಿದರು.
ಟ್ರಾಫಿಕ್ ಸಿಗ್ನಲ್ ಬಿದ್ದಾಗ ಪೊರಕೆ ಹಿಡಿದು ರಸ್ತೆಯಲ್ಲಿದ್ದ ಜಲ್ಲಿಕಲ್ಲುಗಳನ್ನು ಗುಡಿಸಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರೊಬ್ಬರು ಅವರ ಬಳಿಗೆ ವಾಹನಗಳು ಬರದಂತೆ ತಡೆಯುವಲ್ಲಿ ಸಹಕರಿಸಿದರು.
ಏತನ್ಮಧ್ಯೆ, ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ಗುರುವಾರ ತಮ್ಮ ಟ್ವಿಟರ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಘಟನೆ ಯಾವಾಗ ಮತ್ತು ಎಲ್ಲಿ ನಡೆದಿದೆ ಎಂಬುದನ್ನು ಅವರು ಹೇಳಿಲ್ಲ.
ಮತ್ತೊಂದೆಡೆ ರಸ್ತೆ ಗುಡಿಸಿದ ಟ್ರಾಫಿಕ್ ಪೊಲೀಸರಿಗೆ ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ. ಅವರ ಕರ್ತವ್ಯ ಪ್ರಾಮಾಣಿಕತೆಯನ್ನು ನೆಟಿಜನ್ಗಳು ಶ್ಲಾಘಿಸಿದ್ದಾರೆ. ಆ ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಿದ್ದ ವಾಹನಗಳ ನಂಬರ್ ಪ್ಲೇಟ್ಗಳ ಮೂಲಕ ತಮಿಳುನಾಡಿನಲ್ಲಿ ಈ ಘಟನೆ ನಡೆದಿರಬಹುದು ಎಂದು ಕೆಲವರು ಊಹಿಸಿದ್ದಾರೆ.
Netizens Applaud As Video Of Traffic Cop Sweeping Road Goes Viral
Respect for You.🙏 pic.twitter.com/Bb5uZktpZk
— Awanish Sharan (@AwanishSharan) June 16, 2022
Follow Us on : Google News | Facebook | Twitter | YouTube