Central Government Employees : ಕೇಂದ್ರ ಸರ್ಕಾರಿ ನೌಕರರಿಗೆ ಇನ್ನು ಮುಂದೆ ಈ ಸೌಲಭ್ಯಗಳು ಇರುವುದಿಲ್ಲ

New Guidelines for Central Government Employees : ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಮಾರ್ಗಸೂಚಿಗಳು : ಇನ್ನು ಮುಂದೆ ಈ ಸೌಲಭ್ಯಗಳು ಇರುವುದಿಲ್ಲ, ಹಾಗೂ ಹೊಸ ನಿಯಮಗಳನ್ನು ಪಾಲಿಸಬೇಕು

🌐 Kannada News :

New Guidelines for Central Government Employees : ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೇಂದ್ರವೂ ಸಹ ಹಂತಹಂತವಾಗಿ ಅನ್ ಲಾಕ್ ಕ್ರಮಗಳನ್ನು ಕೈಗೊಳ್ಳುತ್ತಿದೆ.

ರಾಜ್ಯ ಸರ್ಕಾರಿ ಮತ್ತು ಖಾಸಗಿ ನೌಕರರು ಈಗಾಗಲೇ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ನಾಳೆ ನವೆಂಬರ್ 8 ರಿಂದ ಕರೋನಾದಿಂದಾಗಿ ನೌಕರರಿಗೆ ಒದಗಿಸಲಾದ ಎಲ್ಲಾ ಸೌಲಭ್ಯಗಳನ್ನು ತೆಗೆದುಹಾಕಲಾಗುವುದು ಎಂದು ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿ ಉಮೇಶ್ ಕುಮಾರ್ ಭಾಟಿಯಾ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಉಪ ಕಾರ್ಯದರ್ಶಿ ಉಮೇಶ್ ಕುಮಾರ್ ಅವರು ಈ ಬಗ್ಗೆ ಮಾತನಾಡಿ, “ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಕಡಿಮೆ ಸಂಖ್ಯೆಯ ನೌಕರರು ಕಚೇರಿಗಳಲ್ಲಿ ಕರ್ತವ್ಯದಲ್ಲಿದ್ದರು. ಕಡಿಮೆ ಸಂಖ್ಯೆಯ ಉದ್ಯೋಗಿಗಳ ಜೊತೆಗೆ ಕೆಲಸದ ಸಮಯವನ್ನು ಕಡಿಮೆ ಮಾಡಲಾಗಿದೆ ಎಂದು ಅವರು ಹೇಳಿದರು. ಆದರೆ, ನವೆಂಬರ್ 8ರಿಂದ ಈ ಸೌಲಭ್ಯಗಳನ್ನು ತೆಗೆದುಹಾಕಲಾಗುವುದು ಎಂದು ಹೇಳಿದರು. ಅವುಗಳ ಜತೆಗೆ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಸರ್ಕಾರಿ ಆದೇಶದಲ್ಲಿ ಹೊರಡಿಸಲಾದ ಮಾರ್ಗಸೂಚಿಗಳು: 

ಬಯೋಮೆಟ್ರಿಕ್ ಯಂತ್ರದ ಬಳಿ ತಪ್ಪದೆ ಸ್ಯಾನಿಟೈಜರ್ ಇರಬೇಕು

ಎಲ್ಲಾ ಉದ್ಯೋಗಿಗಳು ನೋಂದಣಿಗೆ ಮೊದಲು ಮತ್ತು ನಂತರ ತಮ್ಮ ಕೈಗಳನ್ನು ಸ್ವಚ್ಛಗೊಳಿಸಬೇಕು

ಬಯೋಮೆಟ್ರಿಕ್ ನೋಂದಣಿ ಮಾಡುವಾಗ ಉದ್ಯೋಗಿಗಳ ನಡುವಿನ ಆರು ಅಡಿ ಅಂತರ ಅನುಸರಿಸಬೇಕು

ಎಲ್ಲಾ  ಉದ್ಯೋಗಿಗಳು ಯಾವಾಗಲೂ ಮಾಸ್ಕ್ ಅಥವಾ ಮುಖ ಕವಚವನ್ನು ಧರಿಸಬೇಕು

ಬಯೋಮೆಟ್ರಿಕ್ ಮಿಷನ್  ಟಚ್‌ಪ್ಯಾಡ್ ಅನ್ನು ಸ್ವಚ್ಛಗೊಳಿಸಲು ಗೊತ್ತುಪಡಿಸಿದ ಸಿಬ್ಬಂದಿಯನ್ನು ನೇಮಿಸುವುದು

ಬಯೋಮೆಟ್ರಿಕ್ ಯಂತ್ರಗಳನ್ನು ತೆರೆದ ವಾತಾವರಣದಲ್ಲಿ ಇರಿಸಬೇಕು.

ಯಂತ್ರವು ಒಳಗಿದ್ದರೆ  , ಸಾಕಷ್ಟು ನೈಸರ್ಗಿಕ ಗಾಳಿ ಇರಬೇಕು.

➟ ☞ Kannada News Today ಸುದ್ದಿಗಾಗಿ FacebookTwitter ಅನುಸರಿಸಿ. Google News | News App ಡೌನ್ಲೋಡ್ ಮಾಡಿಕೊಳ್ಳಿ.
Scroll Down To More News Today