ನಿರ್ಭಯಾ ಪ್ರಕರಣ : ಕೊನೆಗೂ 4 ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು

ನಿರ್ಭಯಾ ಪ್ರಕರಣ : ಕೊನೆಗೂ 4 ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು - Nirbhaya Case : All 4 Convicts Dead, Confirms Tihar Jail Authorities

ನಿರ್ಭಯಾ ಪ್ರಕರಣ : 2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಾಲ್ವರನ್ನು ದೆಹಲಿ ತಿಹಾರ್ ಜೈಲಿನಲ್ಲಿ ಶುಕ್ರವಾರ ಬೆಳಿಗ್ಗೆ 5.30 ಕ್ಕೆ ಗಲ್ಲಿಗೇರಿಸಲಾಯಿತು.

ಎಲ್ಲ ನಾಲ್ವರು ನಿರ್ಭಯಾ ಅತ್ಯಾಚಾರಿಗಳನ್ನು ಶುಕ್ರವಾರ ಬೆಳಗ್ಗೆ ಸುಮಾರು 5.30ಕ್ಕೆ ಏಕಕಾಲಕ್ಕೆ ತಿಹಾರ್‌ ಜೈಲಿನಲ್ಲಿ ಗಲ್ಲಿಗೆ ಏರಿಸಲಾಯಿತು. ದಿಲ್ಲಿ ಕಾರಾಗೃಹ ನಿಯಮ 2018ರ ಅನುಸಾರ ಗಲ್ಲುಶಿಕ್ಷೆ ಜಾರಿಗೊಳಿಸುವ ಮುನ್ನ ಹಲವು ಪ್ರಕ್ರಿಯೆಗಳನ್ನು ಜೈಲಿನ ಅಧಿಕಾರಿಗಳು ಪಾಲಿಸಬೇಕಾಗುತ್ತದೆ. ಉತ್ತರ ಪ್ರದೇಶದ ಮೀರತ್‌ನಿಂದ ಅನುಭವಿ ಹ್ಯಾಂಗ್‌ಮನ್‌ (ನೇಣಿಗೇರಿಸುವ ವ್ಯಕ್ತಿ) ಗಲ್ಲುಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ.

ನಿರ್ಭಯಾ ಪ್ರಕರಣ - ಕೊನೆಗೂ 4 ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು
ನಿರ್ಭಯಾ ಪ್ರಕರಣ – ಕೊನೆಗೂ 4 ಅಪರಾಧಿಗಳನ್ನು ಗಲ್ಲಿಗೇರಿಸಲಾಯಿತು